ದೀಪಿಕಾ ಪಡುಕೋಣೆ ಸ್ಥಾನಕ್ಕೆ ಪ್ರಿಯಾಂಕಾ ಚೋಪ್ರಾ: ಡಬಲ್ ಧಮಾಕ

04 DEC 2025

By  Manjunatha

ಪ್ರಿಯಾಂಕಾ ಚೋಪ್ರಾ, ಭಾರತೀಯ ಚಿತ್ರರಂಗದಿಂದ ದೂರ ಹಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ.

ಹಾಲಿವುಡ್​ ಮಿಂಚುತ್ತಿದ್ದಾರೆ

ಹಿಂದೊಮ್ಮೆ ಬಾಲಿವುಡ್​ ಬಗ್ಗೆ ಬೇಸರ ಬಂದು ಹಾಲಿವುಡ್​ನಲ್ಲಿ ಅವಕಾಶ ಅರಸಿ ಹೋಗಿದ್ದವರಿಗೆ ಅಲ್ಲಿ ಅವಕಾಶ ಸಿಕ್ಕಿದೆ.

 ಹಾಲಿವುಡ್​ಗೆ ಹೋಗಿದ್ದರು

ಆದರೆ ಇದೀಗ ಪ್ರಿಯಾಂಕಾ ಚೋಪ್ರಾ ಮತ್ತೆ ಭಾರತೀಯ ಚಿತ್ರರಂಗಕ್ಕೆ ಮರಳಿದ್ದಾರೆ. ಅದೂ ದಕ್ಷಿಣದ ಸಿನಿಮಾ ಮೂಲಕ.

 ಚಿತ್ರರಂಗಕ್ಕೆ ಮರಳಿದ್ದಾರೆ

ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು ನಟಿಸುತ್ತಿರುವ ‘ವಾರಣಾಸಿ’ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿ.

 ‘ವಾರಣಾಸಿ’ ಸಿನಿಮಾನಲ್ಲಿ

ಪ್ರಿಯಾಂಕಾ ಚೋಪ್ರಾಗೆ ‘ವಾರಣಾಸಿ’ ಮಾತ್ರವಲ್ಲ ಮತ್ತೊಂದು ದೊಡ್ಡ ಸಿನಿಮಾ ಅವಕಾಶ ಅರಸಿ ಬಂದಿದೆ.

 ದೊಡ್ಡ ಸಿನಿಮಾ ಅವಕಾಶ

ಪ್ರಿಯಾಂಕಾ ಚೋಪ್ರಾ, ಪ್ರಭಾಸ್ ನಟನೆಯ ಭಾರಿ ಬಜೆಟ್ ಸಿನಿಮಾ ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ನಟಿಸಲಿದ್ದಾರಂತೆ.

 ‘ಕಲ್ಕಿ 2898 ಎಡಿ’ ಸಿನಿಮಾ

ದೀಪಿಕಾ ಪಡುಕೋಣೆಯನ್ನು ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್​​ನಿಂದ ಕೈಬಿಡಲಾಗಿದೆ. ಆ ಪಾತ್ರ ಪ್ರಿಯಾಂಕಾ ಪಾಲಾಗಿದೆ.

      ದೀಪಿಕಾ ಪಡುಕೋಣೆ

‘ವಾರಣಾಸಿ’ ಸಿನಿಮಾ ಚಿತ್ರೀಕರಣ ಮುಗಿಸಿದ ಬಳಿಕ ಪ್ರಿಯಾಂಕಾ ಚೋಪ್ರಾ ಆ ಸಿನಿಮಾ ಪ್ರಾರಂಭಿಸಬಹುದು.

      ಶೀಘ್ರವೇ ಚಿತ್ರೀಕರಣ