ತೆಲುಗು ಪ್ರೇಕ್ಷಕರ ಹೃದಯ ಗೆದ್ದ ಪ್ರಿಯಾಂಕಾ ಚೋಪ್ರಾ

16 NOV 2025

By  Manjunatha

ಪ್ರಿಯಾಂಕಾ ಚೋಪ್ರಾ ರಾಜಮೌಳಿ-ಮಹೇಶ್ ಬಾಬು ಸಿನಿಮಾನಲ್ಲಿ ನಾಯಕಿಯಾಗಿ ನಟಿಸುತ್ತಿರುವುದು ಗೊತ್ತಿರುವ ಸಂಗತಿಯೇ.

  ನಟಿ ಪ್ರಿಯಾಂಕಾ ಚೋಪ್ರಾ

ಆರಂಭದಲ್ಲಿ ಪ್ರಿಯಾಂಕಾ ಆಯ್ಕೆಗೆ ತುಸು ಅಪಸ್ವರ ಎದ್ದಿತ್ತು, ಆದರೆ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ತೆಲುಗರ ಮನಗೆದ್ದಿದ್ದಾರೆ.

         ಅಪಸ್ವರ ಎದ್ದಿತ್ತು

ನಿನ್ನೆಯ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಭಾಷಣ, ಮಹೇಶ್ ಅವರ ಭಾಷಣಕ್ಕಿಂತಲೂ ಹೆಚ್ಚು ಹೈಲೆಟ್ ಆಗಿದೆ ಎನ್ನಬಹುದು.

     ಪ್ರಿಯಾಂಕಾ ಚೋಪ್ರಾ

ತೆಲುಗಿನಲ್ಲಿ ಕೆಲ ಡೈಲಾಗ್​ಗಳನ್ನು ಹೇಳಿ ಪ್ರೇಕ್ಷಕರನ್ನು ರಂಜಿಸಿದರು ಪ್ರಿಯಾಂಕಾ, ‘ತಗಲ ಪೆಟ್ಟೆದ್ದಾಮ’ (ಬೆಂಕಿ ಹಚ್ಚೋಣ) ಡೈಲಾಗ್ ಸಖತ್ ಹಿಟ್.

       ‘ತಗಲ ಪೆಟ್ಟೆದ್ದಾಮ’

ಹಾಗೆಯೇ ಮಹೇಶ್ ಬಾಬು ಅವರ ‘ಮೈಂಡ್ ಲೊ ಫಿಕ್ಸ್ ಐತೆ’ ಡೈಲಾಗ್ ಸಹ ಹೇಳಿ ಮಹೇಶ್ ಅಭಿಮಾನಿಗಳಿಂದ ಚಪ್ಪಾಳೆ ಪಡೆದರು.

  ‘ಮೈಂಡ್ ಲೊ ಫಿಕ್ಸ್ ಐತೆ’

ನನಗೆ ತೆಲುಗು ಅಷ್ಟಾಗಿ ಬರುತ್ತಿಲ್ಲ ಆದರೆ ಸಿನಿಮಾ ಬಿಡುಗಡೆ ವೇಳೆಗೆ ನನ್ನ ಭಾಷಣ ಪೂರ್ಣ ತೆಲುಗಿನಲ್ಲಿಯೇ ಇರಲಿದೆ ಎಂದರು.

ತೆಲುಗು ಕಲಿಯಲಿದ್ದಾರಂತೆ

ಅಂದಹಾಗೆ ಮಹೇಶ್ ಬಾಬು ಅವರಿಗೆ ಇನ್ನೊಂದು ಮುದ್ದು ಹೆಸರು ಸಹ ಕೊಟ್ಟರು. ಮಹೇಶ್ ಅವರನ್ನು ‘ಬಾಬ್’ ಎಂದು ಕರೆದರು ಪ್ರಿಯಾಂಕಾ.

 ಮುದ್ದು ಹೆಸರು ಕೊಟ್ಟರು

ಪ್ರಿಯಾಂಕಾ ಚೋಪ್ರಾ ಅವರು ರಾಜಮೌಳಿ ಮತ್ತು ಪೃಥ್ವಿರಾಜ್ ಸುಕುಮಾರ್ ಅವರುಗಳ ಬಗ್ಗೆಯೂ ಮಾತನಾಡಿ ಅವರ ಪ್ರತಿಭೆಯನ್ನು ಕೊಂಡಾಡಿದರು.

ಸಹ ನಟರ ಕೊಂಡಾಡಿದರು