‘ಧುರಂದರ್’ ಸಿನಿಮಾ ಅನ್ನು ಟೀಕಿಸಿದರೇ ನಟಿ ರಾಧಿಕಾ ಆಪ್ಟೆ?

13DEC 2025

By  Manjunatha

ರಣ್ವೀರ್ ಸಿಂಗ್ ನಟನೆಯ ‘ಧುರಂದರ್’ ಸಿನಿಮಾ ಬಿಡುಗಡೆ ಆಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ.

      ‘ಧುರಂದರ್’ ಸಿನಿಮಾ

ಆದರೆ ಸಿನಿಮಾ ಬಗ್ಗೆ ಕೆಲ ಟೀಕೆಗಳು ವ್ಯಕ್ತವಾಗಿವೆ. ಸಿನಿಮಾದ ‘ರಾಜಕೀಯ’ದ ಬಗ್ಗೆ ಹೃತಿಕ್ ರೋಷನ್ ಟೀಕೆ ಮಾಡಿದ್ದಾರೆ.

   ಹೃತಿಕ್ ರೋಷನ್ ಟೀಕೆ

ಇದೀಗ ನಟಿ ರಾಧಿಕಾ ಆಪ್ಟೆ ‘ಧುರಂದರ್’ ಸಿನಿಮಾದಲ್ಲಿ ತೋರಿಸಿರುವ ಹಿಂಸೆಯ ಕಾರಣಕ್ಕೆ ಟೀಕೆ ಮಾಡಿದ್ದಾರೆ.

  ಹಿಂಸೆಯ ಕಾರಣಕ್ಕೆ ಟೀಕೆ

ನಟಿ ರಾಧಿಕಾ ಆಪ್ಟೆ ನೇರವಾಗಿ ‘ಧುರಂದರ್’ ಸಿನಿಮಾದ ಹೆಸರು ಹೇಳಿಲ್ಲವಾದರೂ, ಅವರು ಅದರ ಬಗ್ಗೆ ಮಾತನಾಡಿದ್ದಾರೆಂಬುದು ಎಲ್ಲರಿಗೂ ತಿಳಿದಿದೆ.

ಸಿನಿಮಾದ ಹೆಸರು ಹೇಳಿಲ್ಲ

‘ಇತ್ತೀಚೆಗೆ ಸಿನಿಮಾಗಳಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದೆ. ಇದು ನನಗೆ ಆತಂಕ ತಂದಿದೆ. ಇದು ಸರಿಯಲ್ಲ’ ಎಂದಿದ್ದಾರೆ ರಾಧಿಕಾ.

ಹಿಂಸಾಚಾರ ಹೆಚ್ಚಾಗುತ್ತಿದೆ

ಇಷ್ಟೋಂದು ಹಿಂಸಾಚಾರಕ್ಕೆ ಒತ್ತು ಕೊಡುವ ಪ್ರಪಂಚದಲ್ಲಿ ನಮ್ಮ ಮಕ್ಕಳನ್ನು ಬೆಳೆಸಲು ಭಯವಾಗುತ್ತಿದೆ ಎಂದಿದ್ದಾರೆ ರಾಧಿಕಾ ಆಪ್ಟೆ.

 ಇಷ್ಟೋಂದು ಹಿಂಸಾಚಾರ

ಕೆಲವು ನೆಟ್ಟಿಗರು ರಾಧಿಕಾರ ಮಾತುಗಳನ್ನು ಒಪ್ಪಿದರೆ ಕೆಲವರು ರಾಧಿಕಾ ಪೋಸ್ಟ್​ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

     ನೆಟ್ಟಿಗರ ವಾದವೇನು?

ಗ್ಲಾಮರಸ್ ದೃಶ್ಯಗಳಲ್ಲಿ ನಟಿಸಿರುವ ರಾಧಿಕಾಗೆ, ನೀವು ಅಶ್ಲೀಲ ದೃಶ್ಯಗಳಲ್ಲಿ ನಟಿಸಿವುದು ಸರಿ, ಹಿಂಸೆ ತಪ್ಪೆ? ಎಂದು ಪ್ರಶ್ನಿಸಿದ್ದಾರೆ.

    ಗ್ಲಾಮರಸ್ ದೃಶ್ಯಗಳಲ್ಲಿ