Pic credit - Instagram

Author: Shreelaxmi H

26 Aug 2025

ಹೇಗಿದೆ ನೋಡಿ ರಾಧಿಕಾ ನಾರಾಯಣ್ ಫಿಟ್ನೆಸ್

ರಾಧಿಕಾ ನಾರಾಯಣ್

ರಾಧಿಕಾ ನಾರಾಯಣ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಹಲವು ಸಿನಿಮಾಗಳಲ್ಲಿ ಪ್ರಬುದ್ಧ ಪಾತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಹೊಸ ಫೋಟೋಸ್

ರಾಧಿಕಾ ನಾರಾಯಣ್ ಅವರು ಆಗಾಗ ಹೊಸ ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಕೆಲಸ ಮಾಡುತ್ತಾರೆ. ಈಗ ಅವರ ಹೊಸ ಫೋಟೋ ವೈರಲ್ ಆಗಿದೆ.

ಫಿಟ್ನೆಸ್

ರಾಧಿಕಾ ಅವರ ಹೊಸ ಫೋಟೋಗಳಲ್ಲಿ ಅವರ ಫಿಟ್ನೆಸ್ ಗೊತ್ತಾಗುವ ರೀತಿಯಲ್ಲಿ ಇದೆ. ಅವರು ಸಖತ್ ಸ್ಲಿಪ್ ಹಾಗೂ ಫಿಟ್ ಆಗಿದ್ದಾರೆ ಅನ್ನೋದು ಗೊತ್ತಾಗುತ್ತದೆ.

ಫುಡ್ ಬಗ್ಗೆ

ರಾಧಿಕಾ ನಾರಾಯಣ್ ಅವರು ಫುಡ್ ಬಗ್ಗೆ ಸಾಕಷ್ಟು ಗಮನ ಹರಿಸುತ್ತಾರೆ. ದೇಹಕ್ಕೆ ಒಗ್ಗುವಂತಹ ಆಹಾರಗಳನ್ನು ಮಾತ್ರ ಅವರು ಸೇವನೆ ಮಾಡುತ್ತಾರೆ ಅನ್ನೋದು ವಿಶೇಷ.

ಜಿಮ್

ನಿತ್ಯವೂ ರಾಧಿಕಾ ನಾರಾಯಣ್ ಅವರು ಜಿಮ್ ಮಾಡುತ್ತಾರೆ. ಏನೇ ತಪ್ಪಿಸಿದರೂ ಅವರು ವರ್ಕೌಟ್ ಮಾಡೋದನ್ನು ಮಾತ್ರ ತಪ್ಪಿಸೋದಿಲ್ಲ ಅನ್ನೋದು ವಿಶೇಷ.

ಯೋಗ

ರಾಧಿಕಾ ಅವರು ಯೋಗ ಪ್ರಿಯರು ಕೂಡ ಹೌದು. ದಿನ ನಿತ್ಯ ಯೋಗಾಸನಕ್ಕಾಗಿ ಒಂದಷ್ಟು ಸಮಯವನ್ನು ಅವರು ಮೀಸಲು ಇಡುತ್ತಾರೆ ಎಂಬುದು ವಿಶೇಷ.

ರಂಗಿ ತರಂಗ

ರಂಗಿ ತರಂಗ ಸಿನಿಮಾದಲ್ಲಿ ರಾಧಿಕಾ ನಾರಾಯಣ್ ಅವರು ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಇದರಿಂದ ಅವರ ಜನಪ್ರಿಯತೆ ಹೆಚ್ಚಿತು.

ಪ್ರಬುದ್ಧ ನಟನೆ

ರಾಧಿಕಾ ನಾರಾಯಣ್ ಅವರು ಪ್ರಬುದ್ಧ ನಟನೆ ಎಲ್ಲರಿಗೂ ಇಷ್ಟ ಆಗುತ್ತದೆ. ಅವರು ಈ ರೀತಿಯಲ್ಲಿ ಪ್ರೇಕ್ಷಕರನ್ನು ಹೆಚ್ಚು ಸೆಳೆದುಕೊಳ್ಳುತ್ತಾರೆ.