ಸ್ಟಾರ್ ಪುತ್ರನ ಜೊತೆ ಸ್ಟಾರ್ ನಟಿಯ ಪುತ್ರನ ಡೇಟಿಂಗ್, ಇದೇನಿದು ಹೊಸ ಕತೆ

18 Apr 2025

By  Manjunatha

ಕನ್ನಡದ ‘ಕೆಜಿಎಫ್ 2’ ಸಿನಿಮಾನಲ್ಲಿ ನಟಿಸಿರುವ ರವೀನಾ ಟಂಡನ್ ಪುತ್ರಿ ಇತ್ತೀಚೆಗಷ್ಟೆ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ.

   ರವೀನಾ ಟಂಡನ್ ಪುತ್ರಿ

ರವೀನಾ ಟಂಡನ್ ಪುತ್ರಿ ರಶಾ ತಂಡಾನಿ ಒಂದು ಸಿನಿಮಾದಲ್ಲಿ ನಟಿಸಿದ್ದು, ಎರಡನೇ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ.

ಒಂದು ಸಿನಿಮಾನಲ್ಲಿ ನಟನೆ

ಇನ್ನೂ 20 ವರ್ಷ ವಯಸ್ಸಿನ ರಶಾ ತಂಡಾನಿ ಆಗಲೇ ಬಾಲಿವುಡ್ ಸ್ಟಾರ್ ನಟನ ಪುತ್ರನೊಟ್ಟಿಗೆ ಡೇಟಿಂಗ್ ಶುರು ಮಾಡಿದ್ದಾರೆ.

ರಶಾಗೆ 20 ವರ್ಷ ವಯಸ್ಸು

ರಶಾ ತಂಡಾನಿ ಹಾಗೂ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ಪರಸ್ಪರ ಕೈ-ಕೈ ಹಿಡಿದು ಓಡಾಡುತ್ತಿದ್ದಾರೆ.

    ಇಬ್ರಾಹಿಂ ಅಲಿ ಖಾನ್

ಇತ್ತೀಚೆಗಷ್ಟೆ ರಶಾ ತಂಡಾನಿ ಮತ್ತು ಇಬ್ರಾಹಿಂ ಅಲಿ ಖಾನ್ ಪಾರ್ಟಿಯಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದರು.

   ರಶಾ ಮತ್ತು ಇಬ್ರಾಹಿಂ

ಆ ಬಳಿಕ ರಶಾ ತಂಡಾನಿ ಮತ್ತು ಇಬ್ರಾಹಿಂ ಅಲಿ ಖಾನ್ ಅವರುಗಳು ಒಟ್ಟಿಗೆ ಐಪಿಎಲ್ ಮ್ಯಾಚ್ ನೋಡಲು ಸಹ ಹೋಗಿದ್ದರು.

   IPL ಮ್ಯಾಚ್ ನೋಡಲು

ಅಂದಹಾಗೆ ಇಬ್ರಾಹಿಂ ಅಲಿ ಖಾನ್ ಸಹ ಇತ್ತೀಚೆಗೆ ನಟರಾಗಿದ್ದಾರೆ. ಅವರ ನಟನೆಯ ಒಂದು ಸಿನಿಮಾ ಬಿಡುಗಡೆ ಆಗಿ ಫ್ಲಾಪ್ ಆಗಿದೆ.

  ಮೊದಲ ಸಿನಿಮಾ ಫ್ಲಾಪ್

ರಶಾ ತಂಡಾನಿ ನೋಡಲು ಸುಂದರವಾಗಿದ್ದು ನಟನಾ ಪ್ರತಿಭೆಯೂ ಇದೆ. ಬಾಲಿವುಡ್​ನಲ್ಲಿ ಒಳ್ಳೆಯ ಭವಿಷ್ಯ ಅವರಿಗಿದೆ ಎನ್ನಲಾಗುತ್ತಿದೆ.

 ನಟನಾ ಪ್ರತಿಭೆಯೂ ಇದೆ