ತಮ್ಮದೇ ಸಿನಿಮಾವನ್ನು ಕದ್ದು-ಮುಚ್ಚಿ ನೋಡಿದ ರಶ್ಮಿಕಾ ಮಂದಣ್ಣ

26 OCT 2025

By  Manjunatha

ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ ಭಾರತೀಯ ಚಿತ್ರರಂಗದ ಬಲು ಯಶಸ್ವಿ ನಟಿ.

    ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಒಂದರ ಹಿಂದೆ ಒಂದರಂತೆ ಸತತವಾಗಿ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದಾರೆ.

   ಬ್ಲಾಕ್ ಬಸ್ಟರ್ ಸಿನಿಮಾ

ಇತ್ತೀಚೆಗಷ್ಟೆ ರಶ್ಮಿಕಾ ನಟನೆಯ ‘ಥಮ’ ಸಿನಿಮಾ ಬಿಡುಗಡೆ ಆಯ್ತು, ಆ ಸಿನಿಮಾ ಸಹ ಹಿಂದಿ ಪ್ರದೇಶದಲ್ಲಿ ಒಳ್ಳೆ ಕಲೆಕ್ಷನ್ ಮಾಡುತ್ತಿದೆ.

 ‘ಥಮ’ ಸಿನಿಮಾ ಬಿಡುಗಡೆ

ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ ಕದ್ದು ಮುಚ್ಚಿ ತಮ್ಮ ‘ಥಮ’ ಸಿನಿಮಾವನ್ನು ಚಿತ್ರಮಂದಿರವೊಂದರಲ್ಲಿ ನೋಡಿದ್ದಾರೆ.

    ಸಿನಿಮಾ ನೋಡಿದ್ದಾರೆ

ಈ ಬಗ್ಗೆ ಚಿತ್ರ ಹಾಗೂ ಸಂದೇಶ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ಪ್ರೇಕ್ಷಕರು ತೋರಿದ ಪ್ರೀತಿಗೆ ಭಾವುಕಳಾದೆ ಎಂದಿದ್ದಾರೆ.

  ಸಂದೇಶ ಹಂಚಿಕೊಂಡು

ತಮ್ಮದೇ ಸಿನಿಮಾವನ್ನು ಜನಗಳ ಜೊತೆಗೆ ಕೂತು ನೋಡುವ ಖುಷಿಯನ್ನು ಅನುಭವಿಸಿದ್ದಾಗಿ ರಶ್ಮಿಕಾ ಹೇಳಿಕೊಂಡಿದ್ದಾರೆ.

    ಖುಷಿಅನುಭವಿಸಿದ್ದಾರೆ

ಅದರ ಜೊತೆಗೆ ಸಿನಿಮಾ ನೋಡುವಾಗ ಸಾಲ್ಟೆಡ್ ಮತ್ತು ಕ್ಯಾರಾಮಿಲ್ ಪಾಪ್​​ಕಾರ್ನ್ ಸಹ ಸೇವಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಪಾಪ್​​ಕಾರ್ನ್  ಸೇವಿಸಿದ್ದಾರೆ

ರಶ್ಮಿಕಾ ನಟನೆಯ ‘ಥಮ’ ಹಾರರ್ ಸಿನಿಮಾ ಆಗಿದ್ದು, ರಶ್ಮಿಕಾ ದೆವ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

   ‘ಥಮ’ ಹಾರರ್ ಸಿನಿಮಾ