ಹಾರರ್ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ, ಗೆಲ್ಲುವ ನಿರೀಕ್ಷೆಯಲ್ಲಿ ನಟಿ

13 Apr 2025

By  Manjunatha

ರಶ್ಮಿಕಾ ಮಂದಣ್ಣ ಈಗ ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಅವರಿಗೆ ಹೋದಲ್ಲೆಲ್ಲ ಗೆಲುವು ಸಿಗುತ್ತಿದೆ.

   ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ನಟನೆಯ ಮೂರು ಸಿನಿಮಾಗಳು 1000 ಕೋಟಿ ಕಲೆಕ್ಷನ್ ಮಾಡಿರುವುದು ಅವರ ಅದೃಷ್ಟ, ಪ್ರತಿಭೆಗೆ ಸಾಕ್ಷಿ.

     1000 ಕೋಟಿ ಕಲೆಕ್ಷನ್

ರಶ್ಮಿಕಾ ಸಾಮಾನ್ಯವಾಗಿ ನಟಿಸುವುದು ಗರ್ಲ್ ನೆಕ್ಸ್ಟ್ ಡೋರ್ ರೀತಿಯ ಕ್ಯೂಟ್ ಪಾತ್ರಗಳಲ್ಲಿ ಮಾತ್ರ, ಸವಾಲಿನ ಪಾತ್ರ ಅವರಿಗೆ ಸಿಗುವುದಿಲ್ಲ.

     ಗರ್ಲ್ ನೆಕ್ಸ್ಟ್ ಡೋರ್

ಆದರೆ ಇತ್ತೀಚೆಗೆ ಈ ಮರ ಸುತ್ತುವ ಪಾತ್ರಗಳನ್ನು ದಾಟಿ ತುಸು ಭಿನ್ನವಾಗಿರುವ ಪಾತ್ರಗಳಲ್ಲಿ ಸಹ ನಟಿಸಲು ರಶ್ಮಿಕಾ ಮುಂದಾಗಿದ್ದಾರೆ.

ಭಿನ್ನವಾಗಿರುವ ಪಾತ್ರಗಳಲ್ಲಿ

ಇದೀಗ ‘ಗರ್ಲ್​ಫ್ರೆಂಡ್’ ಹೆಸರಿನ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದು, ಈ ಸಿನಿಮಾ ಮಹಿಳಾ ಪ್ರಧಾನ ಕತೆ ಒಳಗೊಂಡಿದೆ.

  ‘ಗರ್ಲ್​ಫ್ರೆಂಡ್’  ಸಿನಿಮಾ

ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾ ಒಂದನ್ನು ಸಹ ಒಪ್ಪಿಕೊಂಡಿದ್ದಾರೆ. ಸಿನಿಮಾ ಹೆಸರು ‘ತಮ’

ಹಾರರ್ ಸಿನಿಮಾದಲ್ಲಿ ನಟಿ

ಆಯುಷ್ಮಾನ್ ಖುರಾನಾ, ಪರೇಶ್ ರಾವಲ್, ನವಾಜುದ್ದೀನ್ ಸಿದ್ಧಿಖಿ ಅಂಥಹಾ ಪ್ರತಿಭಾವಂತ ನಟರೊಡನೆ ರಶ್ಮಿಕಾ ನಟಿಸಲಿದ್ದಾರೆ.

       ಖ್ಯಾತ ನಟರೊಟ್ಟಿಗೆ

ರಶ್ಮಿಕಾ ಮಂದಣ್ಣ ತಮಗೆ ಹಾರರ್ ಸಿನಿಮಾದಲ್ಲಿ ಗೆಲುವು ಒಂದು ಸಿಗಬೇಕು ಎಂದು ಹೇಳಿಕೊಂಡಿದ್ದು, ತಮ ಗೆಲ್ಲುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

     ಹಾರರ್ ಸಿನಿಮಾದಲ್ಲಿ