ರಾಘವ್ ಲಾರೆನ್ಸ್​ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ

31 AUG 2025

By  Manjunatha

ರಶ್ಮಿಕಾ ಮಂದಣ್ಣ ಪ್ರಸ್ತುತ ಭಾರತದ ನಂಬರ್ 1 ಪ್ಯಾನ್ ಇಂಡಿಯಾ ನಟಿ.

    ನಟಿ ರಶ್ಮಿಕಾ ಮಂದಣ್ಣ

ತೆಲುಗು ಹಾಗೂ ಬಾಲಿವುಡ್​​ನಲ್ಲಿ ರಶ್ಮಿಕಾ ಮಂದಣ್ಣಗೆ ಭಾರಿ ಬೇಡಿಕೆ ಇದೆ. ತಮಿಳಿನಲ್ಲೂ ಸಹ.

        ಭಾರಿ ಬೇಡಿಕೆ ಇದೆ 

ಇದೀಗ ರಶ್ಮಿಕಾ ಮಂದಣ್ಣ ತಮಿಳಿನ ಹೊಸ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದು, ಇದೊಂದು ಹಾರರ್ ಸಿನಿಮಾ ಆಗಿದೆ.

 ತಮಿಳಿನ ಹೊಸ ಸಿನಿಮಾ

ರಾಘವ್ ಲಾರೆನ್ಸ್ ನಟಿಸುತ್ತಾ ಬಂದಿರುವ ಹಾರರ್ ಕಾಮಿಡಿ ‘ಕಾಂಚನಾ’ ಸರಣಿಯ ಹೊಸ ಸಿನಿಮಾನಲ್ಲಿ ರಶ್ಮಿಕಾ ನಾಯಕಿ.

ಹಾರರ್ ಕಾಮಿಡಿ ಸಿನಿಮಾ

ರಾಘವ್ ಲಾರೆನ್ಸ್ ‘ಕಾಂಚನಾ 4’ ಸಿನಿಮಾ ಮಾಡಲಿದ್ದು, ಈ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

 ರಾಘವ್ ಲಾರೆನ್ಸ್ ಜೊತೆಗೆ

ಮೂಲಗಳ ಪ್ರಕಾರ ‘ಕಾಂಚನಾ 4’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಅವರದ್ದು ದೆವ್ವದ ಪಾತ್ರ ಎನ್ನಲಾಗುತ್ತಿದೆ.

  ದೆವ್ವದ ಪಾತ್ರದಲ್ಲಿ ನಟಿ

ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ಹಿಂದಿಯಲ್ಲಿ ‘ಥಮ’ ಹೆಸರಿನ ಹಾರರ್ ಕಾಮಿಡಿ ಸಿನಿಮಾನಲ್ಲಿ ನಟಿಸಿದ್ದಾರೆ.

ಹಾರರ್ ಕಾಮಿಡಿ ಸಿನಿಮಾ

‘ಥಮ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅದರ ಬೆನ್ನಲ್ಲೆ ಇನ್ನೊಂದು ಹಾರರ್​ ಸಿನಿಮಾ ಒಪ್ಪಿಕೊಂಡಿದ್ದಾರೆ.

ಕೆಲವೇ ದಿನಗಳಲ್ಲಿ ರಿಲೀಸ್