ರಶ್ಮಿಕಾ ಮಂದಣ್ಣ ಸಮಾಜ ಸೇವೆ, ಒಟ್ಟಿಗೆ 400 ಕುಟುಂಬಗಳ ದತ್ತು ಪಡೆದ ನಟಿ

14 OCT 2026

By  Manjunatha

ರಶ್ಮಿಕಾ ಮಂದಣ್ಣ ಪ್ರಸ್ತುತ ಭಾರತೀಯ ಚಿತ್ರರಂಗದ ಬಲು ಯಶಸ್ವಿ ಪ್ಯಾನ್ ಇಂಡಿಯಾ ನಟಿ ಎನಿಸಿಕೊಂಡಿದ್ದಾರೆ.

    ನಟಿ ರಶ್ಮಿಕಾ ಮಂದಣ್ಣ

ಒಂದರ ಹಿಂದೊಂದು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟನೆ ಮಾಡುತ್ತಿದ್ದಾರೆ.

    ಬ್ಲಾಕ್ ಬಸ್ಟರ್ ಸಿನಿಮಾ

ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ಭಾರಿ ಬೇಡಿಕೆಯಲ್ಲಿರುವ ನಟಿ ಎನಿಸಿಕೊಂಡಿದ್ದಾರೆ.

 ಹಿಂದಿ ಚಿತ್ರಗಳಲ್ಲಿ ರಶ್ಮಿಕಾ

ರಶ್ಮಿಕಾ, ನಟನೆಯ ಜೊತೆಗೆ ಸಮಾಜ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 

 ಸಮಾಜ ಸೇವೆಯಲ್ಲಿಯೂ

ಇದೀಗ ರಶ್ಮಿಕಾ, ಒಟ್ಟಿಗೆ 400 ಬಡ ಕುಟುಂಬಗಳನ್ನು ದತ್ತು ಪಡೆದುಕೊಂಡಿದ್ದು, ಅವರಿಗೆ ದಿನಸಿ ನೀಡುತ್ತಿದ್ದಾರೆ.

  ಬಡ ಕುಟುಂಬಗಳ ದತ್ತು

400 ಕುಟುಂಬಗಳಿಗೆ ಪ್ರತಿ ತಿಂಗಳು ಅಗತ್ಯ ದಿನಸಿಯನ್ನು ಸತತ ಮೂರು ತಿಂಗಳ ಕಾಲ ರಶ್ಮಿಕಾ ಮಂದಣ್ಣ ನೀಡಲಿದ್ದಾರೆ.

      400 ಕುಟುಂಬಗಳಿಗೆ

ಇದು ಒಂದು ಬಾರಿಯ ಯೋಜನೆಯಲ್ಲ, ಈ ಅಭಿಯಾನವನ್ನು ಅವರು ಒಂದು ವರ್ಷಗಳ ಕಾಲ ನಡೆಸಲಿದ್ದಾರೆ.

   ಒಂದು ವರ್ಷಗಳ ಕಾಲ

ಪ್ರತಿ ಮೂರು ತಿಂಗಳಿಗೆ 400 ಬಡ ಕುಟುಂಬಗಳನ್ನು ರಶ್ಮಿಕಾ ದತ್ತು ಪಡೆದು, ಅವರಿಗೆ ದಿನಸಿ, ತಿಂಗಳ ಅಗತ್ಯ ವಸ್ತುಗಳನ್ನು ನೀಡಲಿದ್ದಾರೆ.

     ತಿಂಗಳ ಅಗತ್ಯ ವಸ್ತು