ರಶ್ಮಿಕಾ ಮಂದಣ್ಣ ಬೆರಳಲ್ಲಿ ನಿಶ್ಚಿತಾರ್ಥದ ಉಂಗುರ, ಅಭಿಮಾನಿಗಳಿಂದ ಶುಭಾಶಯ

11 OCT 2025

By  Manjunatha

ಕನ್ನಡದ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಮತ್ತು ತೆಲುಗು ಚಿತ್ರರಂಗಗಳಲ್ಲಿ ಮಿಂಚುತ್ತಿದ್ದಾರೆ.

    ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಡುವಿನ ಪ್ರೇಮ ಪ್ರಸಂಗ ಎಲ್ಲರಿಗೂ ಗೊತ್ತಿರುವುದೇ.

ರಶ್ಮಿಕಾ ಮಂದಣ್ಣ-ವಿಜಯ್

ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

      ಗುಟ್ಟಾಗಿ ನಿಶ್ಚಿತಾರ್ಥ

ಆದರೆ ಈ ಬಗ್ಗೆ ರಶ್ಮಿಕಾ ಮಂದಣ್ಣ ಆಗಲಿ ವಿಜಯ್ ದೇವರಕೊಂಡ ಆಗಲಿ ಅಧಿಕೃತವಾಗಿ ಏನೂ ಹೇಳಿಲ್ಲ.

   ಅಧಿಕೃತವಾಗಿ ಹೇಳಿಲ್ಲ

ಆದರೆ ಇದೀಗ ಅತ್ತ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಬೆರಳುಗಳಲ್ಲಿ ಉಂಗುರ ಕಾಣಿಸಿಕೊಂಡಿದೆ.

    ಬೆರಳುಗಳಲ್ಲಿ ಉಂಗುರ

ರಶ್ಮಿಕಾ ತಮ್ಮ ನಾಯಿಯ ಜೊತೆಗಿನ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಬೆರಳಿನಲ್ಲಿರುವ ಉಂಗುರ ಕಾಣುತ್ತಿದೆ.

  ನಾಯಿ ಜೊತೆ ವಿಡಿಯೋ

ವಿಜಯ್ ದೇವರಕೊಂಡ ಸಹ ಇತ್ತೀಚೆಗಷ್ಟೆ ಹೊಸ ಸಿನಿಮಾದ ಮುಹೂರ್ತದಲ್ಲಿ ಕಾಣಿಸಿಕೊಂಡಿದ್ದು ಅವರ ಬೆರಳಲ್ಲೂ ಉಂಗುರವಿತ್ತು.

   ಸಿನಿಮಾದ ಮುಹೂರ್ತ

ಇಬ್ಬರ ಬೆರಳಲ್ಲೂ ಉಂಗುರ ಕಂಡು ನಿಶ್ಚಿತಾರ್ಥ ಖಾತ್ರಿಪಡಿಸಿಕೊಂಡಿರುವ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

ಅಭಿಮಾನಿಗಳು ಶುಭಾಶಯ