ಮತ್ತೆ ರಶ್ಮಿಕಾ ಮಂದಣ್ಣರನ್ನು ಕಾಡಿದ ಎಐ, ಕಠಿಣವಾಗಿ ಶಿಕ್ಷಿಸಿ ಎಂದ ನಟಿ

03 DEC 2025

By  Manjunatha

ರಶ್ಮಿಕಾ ಮಂದಣ್ಣ ವೃತ್ತಿಯ ಉತ್ತುಂಗದಲ್ಲಿ ಇದ್ದಾರೆ. ಅವರು ನಟಿಸಿದ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿವೆ.

    ನಟಿ ರಶ್ಮಿಕಾ ಮಂದಣ್ಣ

ಕೊಡಗಿನ ಚೆಲುವೆ ಸ್ಯಾಂಡಲ್​ವುಡ್, ಟಾಲಿವುಡ್​​ಗಳನ್ನು ದಾಟಿ ಈಗ ಬಾಲಿವುಡ್​ನಲ್ಲಿ ಟಾಪ್ ನಟಿಯಾಗಿ ಮೆರೆಯುತ್ತಿದ್ದಾರೆ.

 ಕೊಡಗಿನ ಚೆಲುವೆ ರಶ್ಮಿಕಾ

ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ ರಶ್ಮಿಕಾಗೆ ಎಐ ಕಾಟ ಶುರುವಾಗಿದೆ. ಅವರ ನಕಲಿ ವಿಡಿಯೋ, ಚಿತ್ರಗಳು ಹರಿದಾಡುತ್ತಿವೆ.

       ರಶ್ಮಿಕಾಗೆ ಎಐ ಕಾಟ

ಈ ಹಿಂದೆ ಒಮ್ಮೆ ರಶ್ಮಿಕಾರ ಡೀಪ್​ಫೇಕ್ ವಿಡಿಯೋ ಒಂದು ಹರಿದಾಡಿತ್ತು. ಅದು ಭಾರಿ ಸುದ್ದಿ ಆಗಿತ್ತು.

    ಡೀಪ್​ಫೇಕ್ ವಿಡಿಯೋ

ಇದೀಗ ಮತ್ತೆ ರಶ್ಮಿಕಾರ ಕೆಲವು ನಕಲಿ ಚಿತ್ರ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ನಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಕಲಿ ಚಿತ್ರ, ವಿಡಿಯೋ

ಎಐ ಅನ್ನು ಪ್ರಗತಿಗಾಗಿ, ಮಾನವ ಸೌಕರ್ಯಕ್ಕೆ ಬಳಸಬೇಕು, ಅದನ್ನು ಮಹಿಳೆಯರ ವಿರುದ್ಧ ಬಳಲಾಗುತ್ತಿದೆ ಎಂದಿದ್ದಾರೆ.

     ಮಾನವ ಸೌಕರ್ಯಕ್ಕೆ 

ಮನುಷ್ಯರಾಗಿರಲು ಯೋಗ್ಯರಲ್ಲದ ಅಂಥಹವರನ್ನು ಗುರುತಿಸಿ ಕಠಿಣವಾದ ಮತ್ತು ಕ್ಷಮೆ ಇರದ ಶಿಕ್ಷೆ ನೀಡಬೇಕು ಎಂದಿದ್ದಾರೆ.

    ಕಠಿಣ ಶಿಕ್ಷೆ ನೀಡಬೇಕು

ರಶ್ಮಿಕಾ ಮಂದಣ್ಣ ಈ ಬಗ್ಗೆ ಟ್ವೀಟ್ ಮಾಡಿದ್ದು, ಹಲವರು ರಶ್ಮಿಕಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

 ಬೆಂಬಲ ವ್ಯಕ್ತಪಡಿಸಿದ್ದಾರೆ