ಮತ್ತೊಂದು ಸೂಪರ್ ಹಿಟ್ ನಿರೀಕ್ಷೆಯಲ್ಲಿ ರಶ್ಮಿಕಾ ಮಂದಣ್ಣ

01 NOV 2025

By  Manjunatha

ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ರಶ್ಮಿಕಾ ನಟಿಸಿರುವ ಸಿನಿಮಾಗಳು ಸಾಲಾಗಿ ಹಿಟ್ ಆಗುತ್ತಿವೆ.

    ನಟಿ ರಶ್ಮಿಕಾ ಮಂದಣ್ಣ

‘ಅನಿಮಲ್’, ‘ಪುಷ್ಪ 2’, ‘ಛಾವಾ’, ‘ಕುಬೇರ’ ಸಿನಿಮಾಗಳು ಒಂದರ ಹಿಂದೆ ಒಂದು ಬ್ಲಾಕ್ ಬಸ್ಟರ್ ಆದವು.

   ಬ್ಲಾಕ್ ಬಸ್ಟರ್ ಸಿನಿಮಾ

ಇತ್ತೀಚೆಗೆ ಬಿಡುಗಡೆ ಆದ ‘ಥಮ’ ಸಿನಿಮಾ ಸಹ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಗಳಿಕೆಯನ್ನೇ ಮಾಡುತ್ತಿದೆ.

          ‘ಥಮ’ ಸಿನಿಮಾ

ಇದೀಗ ಮತ್ತೊಂದು ಸೂಪರ್ ಹಿಟ್ ಸಿನಿಮಾ ನಿರೀಕ್ಷೆಯಲ್ಲಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

    ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ನಟನೆಯ ತೆಲುಗು ಸಿನಿಮಾ ‘ಗರ್ಲ್​​ಫ್ರೆಂಡ್’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

   ‘ಗರ್ಲ್​​ಫ್ರೆಂಡ್’ ಸಿನಿಮಾ

‘ಗರ್ಲ್​​ಫ್ರೆಂಡ್’ ಸಿನಿಮಾ ಮೇಲೆ ರಶ್ಮಿಕಾ ಮಂದಣ್ಣಗೆ ಭಾರಿ ನಂಬಿಕೆ ಇದ್ದು, ಈ ಸಿನಿಮಾ ಪಕ್ಕಾ ಹಿಟ್ ಆಗಲಿದೆ ಎಂದಿದ್ದಾರೆ.

   ಸಿನಿಮಾ ಮೇಲೆ ನಂಬಿಕೆ

ಇದು ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಮೊಟ್ಟ ಮೊದಲ ಮಹಿಳಾ ಪ್ರಧಾನ ಸಿನಿಮಾ ಆಗಿದೆ. ಹಾಗಾಗಿ ರಶ್ಮಿಕಾಗೆ ಜವಾಬ್ದಾರಿಯೂ ಹೆಚ್ಚಿದೆ.

 ಮಹಿಳಾ ಪ್ರಧಾನ ಸಿನಿಮಾ

‘ಗರ್ಲ್​​ಫ್ರೆಂಡ್’ ಸಿನಿಮಾ ನವೆಂಬರ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಚಾಲ್ತಿಯಲ್ಲಿದೆ.

 ನವೆಂಬರ್ 7ಕ್ಕೆ ಬಿಡುಗಡೆ