ಸಾಮಾಜಿಕ ಕಾರ್ಯಕ್ಕೆ ಕೈ ಜೋಡಿಸಿದ ರಶ್ಮಿಕಾ ಮಂದಣ್ಣ, ಭೇಷ್ ಎಂದ ನೆಟ್ಟಿಗರು

30 AUG 2025

By  Manjunatha

ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಹಲವು ಭಾಷೆಗಳಲ್ಲಿ ಹಲವು ಸಿನಿಮಾ ಅವರ ಕೈಯಲ್ಲವೆ.

    ನಟಿ ರಶ್ಮಿಕಾ ಮಂದಣ್ಣ

ತೆಲುಗು ಚಿತ್ರರಂಗ ಹಾಗೂ ಬಾಲಿವುಡ್​​ನಲ್ಲಿ ಕಮಾಲ್ ಮಾಡುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

 ಕಮಾಲ್ ಮಾಡುತ್ತಿದ್ದಾರೆ

ಸಿನಿಮಾಗಳ ಜೊತೆಗೆ ಉದ್ಯಮವನ್ನೂ ರಶ್ಮಿಕಾ ಆರಂಭಿಸಿದ್ದು, ಸುಗಂಧ ದ್ರವ್ಯ ಕಂಪೆನಿಯನ್ನು ಸ್ಥಾಪಿಸಿದ್ದಾರೆ.

   ರಶ್ಮಿಕಾ  ಈಗ ಉದ್ಯಮಿ

ಇದೀಗ ರಶ್ಮಿಕಾ ಮಂದಣ್ಣ ಸಾಮಾಜಿಕ ಕಾರ್ಯವೊಂದಕ್ಕೆ ಕೈ ಹಾಕಿದ್ದಾರೆ. ಬಡ ಮಕ್ಕಳ ನೆರವಿಗೆ ನಟಿ ನಿಂತಿದ್ದಾರೆ.

 ಸಾಮಾಜಿಕ ಕಾರ್ಯಕ್ಕೆ ಕೈ

ತಮ್ಮ ಸುಗಂಧ ದ್ರವ್ಯ ಬ್ರ್ಯಾಂಡ್ ‘ಡಿಯರ್ ಡೈರಿ’ ಮೂಲಕ ಸ್ಮೈಲ್ ಫೌಂಡೇಶನ್ ಜೊತೆಗೆ ಅವರು ಸೇರಿಕೊಂಡಿದ್ದಾರೆ.

ಸ್ಮೈಲ್ ಫೌಂಡೇಶನ್ ಜೊತೆ

ಬಡ ಮಕ್ಕಳ ಶಿಕ್ಷಣಕ್ಕೆ ರಶ್ಮಿಕಾ ಮಂದಣ್ಣ ನೆರವು ನೀಡಲಿದ್ದಾರೆ. ಪ್ರತಿ ವರ್ಷವೂ ನಿಗದಿತ ಮೊತ್ತವನ್ನು ಅವರ ಕಂಪೆನಿಯಿಂದ ನೀಡಲಿದ್ದಾರೆ.

        ಬಡ ಮಕ್ಕಳ ಶಿಕ್ಷಣ

ಕೈಂಡ್​​ನೆಸ್ ಎಕಾನಮಿ (ಮಾನವೀಯ ಆರ್ಥಿಕತೆ) ಹೆಸರಿನಲ್ಲಿ ಡಿಯರ್ ಡೈರಿ ಸಂಸ್ಥೆ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲಿದೆ.

    ಶಿಕ್ಷಣಕ್ಕೆ ರಶ್ಮಿಕಾ ನೆರವು

ರಶ್ಮಿಕಾ ಮಂದಣ್ಣ ಪ್ರಸ್ತುತ ಮೂರು ಹಿಂದಿ ಸಿನಿಮಾ ಹಾಗೂ ಮೂರು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಕೈಯಲ್ಲಿರುವ ಸಿನಿಮಾಗಳು