ಮತ್ತೊಂದು ವಿವಾದದಲ್ಲಿ ನಟಿ ರಶ್ಮಿಕಾ ಮಂದಣ್ಣ, ಈ ಬಾರಿ ಆಗಿದ್ದೇನು?

05 July 2025

By  Manjunatha

ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಈಗ ತೆಲುಗು, ಬಾಲಿವುಡ್ ಹಾಗೂ ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

    ನಟಿ ರಶ್ಮಿಕಾ ಮಂದಣ್ಣ

ಆದರೆ ರಶ್ಮಿಕಾ ಮಂದಣ್ಣ ತಮ್ಮ ಬಿಡು ಬೀಸು ಮಾತು, ಅಜ್ಞಾನದ ಮಾತುಗಳಿಂದಾಗಿ ಆಗಾಗ್ಗೆ ವಿವಾದಕ್ಕೆ ಕಾರಣ ಆಗುತ್ತಿರುತ್ತಾರೆ.

  ನಟಿಗೆ ವಿವಾದ ಸಾಮಾನ್ಯ

ಈ ಹಿಂದೆ ತಮಗೆ ಕನ್ನಡ ಬರಲ್ಲ ಎಂದಿದ್ದರು, ನನ್ನ ಊರು ಹೈದರಾಬಾದ್ ಎಂದಿದ್ದರು ಹೀಗೆ ನೆಲ, ಭಾಷೆಯ ಕುರಿತಾಗಿ ಗೊಂದಲದ ಹೇಳಿಕೆ ನೀಡುತ್ತಲೇ ಇರುತ್ತಾರೆ.

     ಹಲವು ಬಾರಿ ವಿವಾದ

ಬಹಳ ಸಮಯದಿಂದ ಯಾವುದೇ ವಿವಾದ ಇರದಂತಿದ್ದ ರಶ್ಮಿಕಾ ಈಗ ಮತ್ತೊಂದು ವಿವಾದಕ್ಕೆ ಕಾರಣ ಆಗಿದ್ದಾರೆ. 

 ಈಗ ಮತ್ತೊಂದು ವಿವಾದ

ಸಂದರ್ಶನವೊಂದರಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ, ತಾನು ಕೊಡವ ಸಮುದಾಯದ ಮೊದಲ ನಾಯಕಿ ಎಂದಿದ್ದಾರೆ.

    ಕೊಡವ ಸಮುದಾಯ

ಆದರೆ ಅದು ತಪ್ಪು ಮಾಹಿತಿ ಆಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವ ಪ್ರೇಮಾ ಸಹ ಕೊಡವ ಸಮುದಾಯದವರು.

     ಅದು ತಪ್ಪು ಮಾಹಿತಿ

ಅವರು ಮಾತ್ರ ಅಲ್ಲದೆ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ಶ್ವೇತಾ ಚಂಗಪ್ಪ, ಕೃಷಿ ತಾಪಂಡ, ಡೈಸಿ ಬೋಪಣ್ಣ ಸಹ ಕೊಡವಿನವರು.

    ಹಲವು ನಟಿಯರಿದ್ದಾರೆ

ರಶ್ಮಿಕಾ ಮಂದಣ್ಣ ಅವರ ಈ ಹೇಳಿಕೆಗೆ ಕೊಡವ ಸಮುದಾಯದ ನಾಯಕಿಯರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

 ನಟಿಯರ ತೀವ್ರ ವಿರೋಧ