ಮದುವೆ ಆದ ಮೇಲೆ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲವೇ ರಶ್ಮಿಕಾ?

01 May 2026

By  Manjunatha

ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ನಟಿ. ಹಲವು ಬ್ಲಾಕ್ ಬಸ್ಟರ್ ಅವರು ನೀಡಿದ್ದಾರೆ.

    ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಇತ್ತೀಚೆಗಷ್ಟೆ ವಿಜಯ್ ದೇವರಕೊಂಡ ಜೊತೆಗೆ ವಿವಾಹವಾಗಿದ್ದು, ದಾಂಪತ್ಯ ಶುರು ಮಾಡಿದ್ದಾರೆ.

  ವಿಜಯ್ ದೇವರಕೊಂಡ

ಮದುವೆಯಾದ ಕೆಲವೇ ದಿನಗಳಲ್ಲಿ ಮತ್ತೆ ಚಿತ್ರೀಕರಣಕ್ಕೆ ಸಹ ರಶ್ಮಿಕಾ ಮರಳಿದ್ದು, ಈಗವರು ಚಿತ್ರೀಕರಣದಲ್ಲಿ ಬ್ಯುಸಿ.

      ಮತ್ತೆ ಚಿತ್ರೀಕರಣಕ್ಕೆ

ಆದರೆ ರಶ್ಮಿಕಾ ಮಂದಣ್ಣ ಯಾವುದೇ ಹೊಸ ಸಿನಿಮಾಗಳನ್ನು ಸದ್ಯಕ್ಕೆ ಒಪ್ಪಿಕೊಳ್ಳುತ್ತಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ.

  ಸದ್ಯಕ್ಕೆ ಒಪ್ಪಿಕೊಳ್ಳುತ್ತಿಲ್ಲ

ಪ್ರಸ್ತುತ ಅವರ ಕೈಯಲ್ಲಿ ಕೆಲ ಸಿನಿಮಾಗಳಿದ್ದು, ಅವುಗಳ ಮುಗಿಸಿದ ಬಳಿಕ ಅವರು ಹೊಸ ಸಿನಿಮಾನಲ್ಲಿ ನಟಿಸುವುದಿಲ್ಲ ಎನ್ನಲಾಗುತ್ತಿದೆ.

    ಚಿತ್ರೀಕರಣದಲ್ಲಿ ಭಾಗಿ

ಆದರೆ ಮದುವೆಗೆ ಮುಂಚೆ ಈ ಬಗ್ಗೆ ಮಾತನಾಡಿದ್ದ ನಟಿ, ತಾವು ಮದುವೆ ಆದ ಬಳಿಕವೂ ನಟಿಸುವುದಾಗಿಯೇ ಹೇಳಿದ್ದರು.

     ಮದುವೆ ಆದ ಬಳಿಕ

ಸದ್ಯಕ್ಕೆ ರಶ್ಮಿಕಾ ಮಂದಣ್ಣ, ಪತಿ ವಿಜಯ್ ಜೊತೆ ‘ರಣಬಲಿ’ ಮತ್ತು ‘ಮೈಸಾ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

 ವಿಜಯ್ ಜೊತೆ ‘ರಣಬಲಿ’

ಅದಾದ ಬಳಿಕ ಇನ್ಯಾವ ಸಿನಿಮಾನಲ್ಲಿ ನಟಿಸಲಿದ್ದಾರೆ ಎಂಬ ಬಗ್ಗೆ ಇನ್ನೂ ಖಾತ್ರಿ ಇಲ್ಲ.

    ಇನ್ಯಾವ ಸಿನಿಮಾನಲ್ಲಿ