ಎರಡು ಭಾಷೆಗಳಲ್ಲಿ ಎರಡು ಹೊಸ ಸಿನಿಮಾಗಳಿಗೆ ಸಹಿ ಹಾಕಿದ ರಶ್ಮಿಕಾ ಮಂದಣ್ಣ

10 June 2025

By  Manjunatha

ನಟಿ ರಶ್ಮಿಕಾ ಮಂದಣ್ಣ ಈಗ ತೆಲುಗು ಹಾಗೂ ಬಾಲಿವುಡ್ ಎರಡರಲ್ಲೂ ಸಖತ್ ಬ್ಯುಸಿ ಆಗಿದ್ದಾರೆ.

    ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಕೈಯಲ್ಲಿ ಈಗ ಹಲವಾರು ಸಿನಿಮಾಗಳಿವೆ. ಮೋಸ್ಟ್ ಬ್ಯುಸಿ ನಟಿಯರಲ್ಲಿ ರಶ್ಮಿಕಾ ಪ್ರಮುಖರಾಗಿದ್ದಾರೆ.

       ಮೋಸ್ಟ್ ಬ್ಯುಸಿ ನಟಿ

ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ಒಂದು ತೆಲುಗಿನ ಹಾಗೂ ಒಂದು ಬಾಲಿವುಡ್​ನ ಹೊಸ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ.

    ಎರಡು ಹೊಸ ಸಿನಿಮಾ

2012 ರಲ್ಲಿ ಬಿಡುಗಡೆ ಆಗಿದ್ದ ‘ಕಾಕ್​ಟೇಲ್’ ಹಿಂದಿ ಸಿನಿಮಾದ ಎರಡನೇ ಭಾಗದಲ್ಲಿ ನಟಿ ರಶ್ಮಿಕಾ ನಟಿಸಲಿದ್ದಾರೆ.

 ‘ಕಾಕ್ಟೆಲ್ 2’ ಚಿತ್ರ ನಾಯಕಿ

ಇನ್ನು ತೆಲುಗಿನಲ್ಲಿಯೂ ಸಹ ರಶ್ಮಿಕಾ ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಹೊಸ ಸಿನಿಮಾನಲ್ಲಿ ಅವರು ಸ್ಟಾರ್ ನಟನಿಗೆ ಜೊತೆ ಆಗಲಿದ್ದಾರೆ.

  ತೆಲುಗಿನ ಹೊಸ ಸಿನಿಮಾ

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಿ, ರಾಮ್ ಚರಣ್ ನಟಿಸಲಿರುವ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ನಾಯಕಿ.

 ರಾಮ್ ಚರಣ್​ಗೆ ನಾಯಕಿ

ಇದರ ಹೊರತಾಗಿ ರಶ್ಮಿಕಾ ಪ್ರಸ್ತುತ ‘ತಮ’ ಹೆಸರಿನ ಹಿಂದಿ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆಯುಷ್ಮಾನ್ ಖುರಾನ ನಾಯಕ.

    ‘ತಮ’ ಹಿಂದಿ ಸಿನಿಮಾ

ತೆಲುಗಿನಲ್ಲಿ ‘ಗರ್ಲ್​ಫ್ರೆಂಡ್’ ಹಾಗೂ ವಿಜಯ್ ದೇವರಕೊಂಡ ಜೊತೆಗೆ ‘ಗೀತಾ ಗೋವಿಂದಂ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

 ತೆಲುಗಿನ ಹಲವು ಸಿನಿಮಾ