ಗರ್ಲ್​ ಫ್ರೆಂಡ್ ಸಿನಿಮಾ ಹಾಡು ಬಿಡುಗಡೆ, ಗಮನ ಸೆಳೆದ ರಶ್ಮಿಕಾ ಮಂದಣ್ಣ

26 AUG 2025

By  Manjunatha

ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದೆ. ಅವರ ನಟನೆಯ ಸಿನಿಮಾಗಳು ಒಂದರ ಹಿಂದೊಂದು ಹಿಟ್ ಆಗುತ್ತಿವೆ.

    ಮುಟ್ಟಿದ್ದೆಲ್ಲವೂ ಚಿನ್ನ

‘ಪುಷ್ಪ 2’, ‘ಅನಿಮಲ್’, ‘ಛಾವಾ’, ‘ಕುಬೇರ’ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಬ್ಲಾಕ್ ಬಸ್ಟರ್​​ಗಳಾಗಿವೆ.

     ಬ್ಲಾಕ್ ಬಸ್ಟರ್ ಆಗಿವೆ

ರಶ್ಮಿಕಾ ಮಂದಣ್ಣ ಬಹುತೇಕ ಸಿನಿಮಾಗಳಲ್ಲಿ ಬಬ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.

  ಬಬ್ಲಿ ನಾಯಕಿಯ ಪಾತ್ರ

ಹಾಡು, ಗ್ಲಾಮರ್, ರೊಮ್ಯಾನ್ಸ್ ತುಸು ಹಾಸ್ಯ ಇಷ್ಟಕ್ಕೆ ರಶ್ಮಿಕಾ ಮಂದಣ್ಣ ಪಾತ್ರಗಳು ಸೀಮಿತವಾಗಿರುತ್ತವೆ.

  ರಶ್ಮಿಕಾ ಮಂದಣ್ಣ ಪಾತ್ರ

ಆದರೆ ಇದೀಗ ರಶ್ಮಿಕಾ ತಮ್ಮ ಅಭಿನಯ ಪ್ರತಿಭೆ ತೋರಿಸುವ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಹೆಸರು ‘ಗರ್ಲ್​​ಫ್ರೆಂಡ್’.

ಪ್ರತಿಭೆ ತೋರಿಸುವ ಸಿನಿಮಾ

ಈ ಸಿನಿಮಾದ ಹಾಡೊಂದು ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಹಾಡು ಮಧುರವಾಗಿರುವ ಜೊತೆಗೆ ರಶ್ಮಿಕಾ ಸಹ ಗಮನ ಸೆಳೆದಿದ್ದಾರೆ.

ರಶ್ಮಿಕಾ ಗಮನ ಸೆಳೆದಿದ್ದಾರೆ

ಹಾಡಿನಲ್ಲಿ ರಶ್ಮಿಕಾ ಬಲು ಮುದ್ದಾಗಿಯೂ ಇನ್ನೋಸೆಂಟ್ ಆಗಿಯೂ ಕಾಣಿಸಿಕೊಂಡಿದ್ದಾರೆ. ರಶ್ಮಿಕಾರ ನಟನೆ ಗಮನ ಸೆಳೆಯುತ್ತಿದೆ.

ಬಲು ಮುದ್ದಾಗಿ ಕಾಣುತ್ತಾರೆ

ಅಂದಹಾಗೆ ‘ಗರ್ಲ್​​ಫ್ರೆಂಡ್’ ಸಿನಿಮಾನಲ್ಲಿ ರಶ್ಮಿಕಾ ಬಾಯ್​ಫ್ರೆಂಡ್ ಆಗಿ ಕನ್ನಡಿಗ ನಟ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ.

ಕನ್ನಡಿಗ ನಟ ದೀಕ್ಷಿತ್ ಶೆಟ್ಟಿ