‘ಗರ್ಲ್​ಫ್ರೆಂಡ್’ ಸಿನಿಮಾ ಏನಾಯ್ತು? ಅಪ್​ಡೇಟ್ ಕೊಟ್ಟ ರಶ್ಮಿಕಾ ಮಂದಣ್ಣ

18 May 2025

By  Manjunatha

ರಶ್ಮಿಕಾ ಮಂದಣ್ಣ ಈ ವರೆಗೆ ನಟಿಸಿರುವ ಬಹುತೇಕ ಪಾತ್ರಗಳು, ಕಮರ್ಶಿಯಲ್ ಸಿನಿಮಾದ ‘ನಾಯಕಿ’ ಪಾತ್ರಗಳು.

    ನಟಿ ರಶ್ಮಿಕಾ ಮಂದಣ್ಣ

ನಾಯಕರು, ನಾಯಕ ಪ್ರಧಾನ ಸಿನಿಮಾಗಳಲ್ಲಿ ಹಾಡು, ರೊಮ್ಯಾಂಟಿಕ್ ಸೀನ್​ಗಳಿಗಷ್ಟೆ ರಶ್ಮಿಕಾ ಸೀಮಿತರಾಗಿದ್ದಾರೆ ಹಲವು ಸಿನಿಮಾನಲ್ಲಿ.

ನಾಯಕ ಪ್ರಧಾನ ಸಿನಿಮಾ

ಆದರೆ ರಶ್ಮಿಕಾ ಕಳೆದ ವರ್ಷ ‘ಗರ್ಲ್​ಪ್ರೆಂಡ್’ ಹೆಸರಿನ ಸಿನಿಮಾ ಪ್ರಾರಂಭಿಸಿದ್ದು, ಇದರಲ್ಲಿ ರಶ್ಮಿಕಾರ ಪಾತ್ರವೇ ಪ್ರಧಾನವಾದುದು.

  ‘ಗರ್ಲ್​ಪ್ರೆಂಡ್’  ಸಿನಿಮಾ

‘ಗರ್ಲ್​ಫ್ರೆಂಡ್’ ಸಿನಿಮಾ ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ಯುವತಿಯರ ಸಮಸ್ಯೆಗಳ ಬಗ್ಗೆ ಮಾತನಾಡುವ ಸಿನಿಮಾ.

 ಮಹಿಳಾ ಪ್ರಧಾನ ಸಿನಿಮಾ

ಈ ಸಿನಿಮಾದ ಟೀಸರ್ ಒಂದನ್ನು ಬಿಡುಗಡೆ ಮಾಡಲಾಗಿತ್ತು, ಆದರೆ ತಿಂಗಳುಗಳೇ ಕಳೆದರು ಸಿನಿಮಾದ ಅಪ್​ಡೇಟ್ ಹೊರಬಂದಿಲ್ಲ.

ಅಪ್​ಡೇಟ್ ಹೊರಬಂದಿಲ್ಲ

ಇದೀಗ ಈ ಬಗ್ಗೆ ಟ್ವೀಟ್ ಮಾಡಿರುವ ರಶ್ಮಿಕಾ, ‘ಗರ್ಲ್​ಫ್ರೆಂಡ್’ ನನ್ನ ಪಾಲಿಗೆ ಅತ್ಯಂತ ವಿಶೇಷವಾದುದು, ಸಿನಿಮಾದ ಬಗ್ಗೆ ಅಪ್​ಡೇಟ್ ಬೇಗ ಕೊಡುತ್ತೀವಿ ಎಂದಿದ್ದಾರೆ.

  ಅತ್ಯಂತ ವಿಶೇಷ ಸಿನಿಮಾ

ಇದು ಪಾತ್ರಗಳನ್ನೇ ಆಧರಿಸಿದ ಸಿನಿಮಾ ಆಗಿದ್ದು, ನಿರ್ದೇಶಕರು ಅತ್ಯುತ್ತಮ ಸಿನಿಮಾ ನೀಡಲು ಬಹಳ ಯತ್ನಿಸುತ್ತಿದ್ದಾರೆ ಎಂದಿದ್ದಾರೆ.

    ಮಹತ್ವವಾದ ಸಿನಿಮಾ

ಈಗಾಗಲೇ ನೀವು ಸಾಕಷ್ಟು ಕಾದಿದ್ದೀರಿ ಆದರೆ ನಿಮ್ಮನ್ನು ಹೆಚ್ಚು ಕಾಯಿಸದೆ ಸಿನಿಮಾ ಅಪ್​ಡೇಟ್ ಬೇಗನೆ ಕೊಡುತ್ತೀವಿ ಎಂದಿದ್ದಾರೆ.

   ಶೀಘ್ರವೇ ಅಪ್​ಡೇಟ್