ಕೆಟ್ಟದ್ದೇ ನಡೆಯುವಾಗ, ಸೋಲುಗಳು ಎದುರಾದಾಗ ಹೇಗೆ ನಿಭಾಯಿಸುತ್ತಾರೆ ರಶ್ಮಿಕಾ

31 May 2025

By  Manjunatha

ರಶ್ಮಿಕಾ ಮಂದಣ್ಣ ಕಳೆದ ವರ್ಷದ ಭಾರತದ ಅತ್ಯಂತ ಯಶಸ್ವಿ ನಟಿ. ಅವರಷ್ಟು ಯಶಸ್ಸು ಕಳೆದ ವರ್ಷ ಯಾರಿಗೂ ಸಿಕ್ಕಿಲ್ಲ.

   ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ನಟನೆಯ ಬರೋಬ್ಬರಿ ಮೂರು ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ದಾಖಲೆ ಬರೆದವು. ಸಾವಿರಾರು ಕೋಟಿ ಗಳಿಸಿದವು.

     ಯಶಸ್ವಿ ನಟಿ ರಶ್ಮಿಕಾ

ಆದರೆ ಸಮಯ ಸದಾ ಹೀಗೆಯೇ ಇರಲಿಲ್ಲ. ರಶ್ಮಿಕಾ ಮಂದಣ್ಣ ವೃತ್ತಿ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿ ಮೇಲೆ ಬಂದಿದ್ದಾರೆ.

ಏಳು-ಬೀಳು ಎದುರಿಸಿದ್ದಾರೆ

ಆದರೆ ಆ ಕಷ್ಟದ ಸಮಯಗಳನ್ನು ಹೇಗೆ ಎದುರಿಸುತ್ತೀರಿ, ಸತತ ಸೋಲುಗಳೇ ಎದುರಾದಾಗ ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ್ದಾರೆ.

   ಹೇಗೆ ನಿಭಾಯಿಸುತ್ತೀರಿ?

ಅಂತಹಾ ಕಷ್ಟದ ಸಮಯ ಬಂದಾಗ ಕಣ್ಣು ಮುಚ್ಚಿ ದೀರ್ಘವಾಗಿ ಉಸಿರಾಡಿ, ನಿಮ್ಮ ಸುತ್ತಲೂ ಒಳ್ಳೆಯ ಜನರು ಇರುವಂತೆ ನೋಡಿಕೊಳ್ಳಿ ಎಂದಿದ್ದಾರೆ.

      ಆವಾಗ ಹೀಗೆ ಮಾಡಿ

ಪ್ರತಿ ಕಷ್ಟಗಳು ಕರಗಿ ಹೋಗುತ್ತವೆ, ಕತ್ತಲಿನ ನಂತರ ಬೆಳಕು ಬರುತ್ತದೆ ಎಂಬುದನ್ನು ಪದೇ ಪದೇ ನೆನಪು ಮಾಡಿಕೊಳ್ಳಿ ಎಂದಿದ್ದಾರೆ ನಟಿ.

ಕಷ್ಟಗಳು ಕರಗಿ ಹೋಗುತ್ತವೆ

ಪದೇ ಪದೇ ಸಕಾರಾತ್ಮಕ ಚಿಂತನೆಯನ್ನೇ ಮಾಡಿ, ನಿಮ್ಮ ಮೇಲೆ ನೀವು ನಂಬಿಕೆ ಇಡಿ, ನಿಮ್ಮನ್ನು ಪ್ರೀತಿಸುವ ಜನರಿಂದಲೇ ನೀವು ಸುತ್ತುವರೆದಿರಿ ಎಂದು ಸಲಹೆ ಕೊಟ್ಟಿದ್ದಾರೆ.

ಸಕಾರಾತ್ಮಕ ಚಿಂತನೆ ಮಾಡಿ

ರಶ್ಮಿಕಾ ಮಂದಣ್ಣ ಇದೀಗ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ.

 ಬಹಳ ಬ್ಯುಸಿಯಾಗಿದ್ದಾರೆ