ಯಾರೂ ಊಹಿಸದ ಪಾತ್ರದಲ್ಲಿ ನಟಿಸಲಿದ್ದಾರೆ ನಟಿ ರಶ್ಮಿಕಾ ಮಂದಣ್ಣ

12 July 2025

By  Manjunatha

ರಶ್ಮಿಕಾ ಮಂದಣ್ಣ ಈಗ ತೆಲುಗು ಚಿತ್ರರಂಗ ಹಾಗೂ ಬಾಲಿವುಡ್​ನ ಬಲು ಬೇಡಿಕೆಯ ನಟಿ.

     ನಟಿ ರಶ್ಮಿಕಾ ಮಂದಣ್ಣ

ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ರಶ್ಮಿಕಾ ಮಂದಣ್ಣ ನೀಡುತ್ತಿದ್ದಾರೆ. ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡುತ್ತಿವೆ.

 ಸಿನಿಮಾ ಭರ್ಜರಿ ಕಲೆಕ್ಷನ್

ಆದರೆ ಸೂಕ್ಷ್ಮವಾಗಿ ಗಮನಿಸಿದರೆ ರಶ್ಮಿಕಾ ನಟಿಸುತ್ತಿರುವ ಬಹುತೇಲ ಸಿನಿಮಾಗಳು ಸಂಪೂರ್ಣ ನಾಯಕ ಪ್ರಧಾನ ಸಿನಿಮಾಗಳು.

ನಾಯಕ ಪ್ರಧಾನ ಸಿನಿಮಾ

ಬ್ಲಾಕ್ ಬಸ್ಟರ್ ಆದ ‘ಪುಷ್ಪ’, ‘ಅನಿಮಲ್’, ‘ಛಾವಾ’ ಎಲ್ಲವೂ ಸಂಪೂರ್ಣ ನಾಯಕ ಪ್ರಧಾನ ಸಿನಿಮಾ.

   ಬ್ಲಾಕ್ ಬಸ್ಟರ್ ಸಿನಿಮಾ

ಈ ಸಿನಿಮಾಗಳಲ್ಲಿ ರಶ್ಮಿಕಾ ಪಾತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರಲಿಲ್ಲ. ಇದರಿಂದಾಗಿ ರಶ್ಮಿಕಾ ತಮ್ಮ ಅಭಿನಯ ಪ್ರತಿಭೆ ಪ್ರೂವ್ ಮಾಡಿಕೊಳ್ಳಲು ಮುಂದಾಗಿದ್ದಾರೆ.

        ಜಿದ್ದಿಗೆ ಬಿದ್ದ ನಟಿ

ರಶ್ಮಿಕಾ ಮಂದಣ್ಣ ಭಾರತದ ಬಲು ಬೇಡಿಕೆಯ ನಾಯಕಿ ಆಗಿರುವಾಗಲೇ ವಿಲನ್ ಪಾತ್ರಕ್ಕೆ ಓಕೆ ಹೇಳಿದ್ದಾರೆ.

 ಬಲು ಬೇಡಿಕೆಯ ನಾಯಕಿ

ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್-ದೀಪಿಕಾ ಪಡುಕೋಣೆ ನಟನೆಯ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ.

    ವಿಲನ್ ಪಾತ್ರದಲ್ಲಿ ನಟಿ

ಅಲ್ಲು ಅರ್ಜುನ್ ನಟಿಸಲಿರುವ ಹೊಸ ಸಿನಿಮಾವನ್ನು ಅಟ್ಲಿ ನಿರ್ದೇಶಿಸುತ್ತಿದ್ದು, ದೀಪಿಕಾ ಪಡುಕೋಣೆ ಈ ಸಿನಿಮಾದ ನಾಯಕಿ.

      ದೀಪಿಕಾ ಪಡುಕೋಣೆ