ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟನ ಜೊತೆ ನಟಿಸಲಿರುವ ರಶ್ಮಿಕಾ ಮಂದಣ್ಣ

30 Mar 2025

By  Manjunatha

ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್​ನ ಟಾಪ್ 1 ನಟಿಯಾಗುವತ್ತ ದಾಪುಗಾಲಿಡುತ್ತಿದ್ದಾರೆ.

    ನಟಿ ರಶ್ಮಿಕಾ ಮಂದಣ್ಣ

ತೆಲುಗು ಚಿತ್ರರಂಗದ ಸ್ಟಾರ್ ನಟರೊಟ್ಟಿಗೆ ನಟಿಸಿ ಸ್ಟಾರ್ ನಟಿಸಿ ಎನಿಸಿಕೊಂಡಿದ್ದ ರಶ್ಮಿಕಾ, ಈಗ ಬಾಲಿವುಡ್​ ಮೇಲೆ ಕಣ್ಣು ಹಾಕಿದ್ದಾರೆ.

  ಬಾಲಿವುಡ್​ಗೆ ಹಾರಿದ್ದಾರೆ

ಬಾಲಿವುಡ್​ನಲ್ಲಿ ಈಗಾಗಲೇ ಒಂದರ ಹಿಂದೆ ಒಂದರಂತೆ ಎರಡು ಸೂಪರ್ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ.

   ಬ್ಲಾಕ್ ಬಸ್ಟರ್ ಸಿನಿಮಾ

ಅಮಿತಾಬ್ ಬಚ್ಚನ್, ರಣ್​ಬೀರ್ ಕಪೂರ್, ಸಲ್ಮಾನ್ ಖಾನ್, ವಿಕ್ಕಿ ಕೌಶಲ್ ಅವರುಗಳಿಗೆ ನಾಯಕಿಯಾಗಿ ರಶ್ಮಿಕಾ ನಟಿಸಿದ್ದಾರೆ.

ಸ್ಟಾರ್ ನಟರೊಟ್ಟಿಗೆ ನಟನೆ

ಇದೀಗ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟನ ಎದುರು ನಾಯಕಿಯಾಗಿ ರಶ್ಮಿಕಾ ನಟಿಸಲಿದ್ದು, ಸಿನಿಮಾದ ಶೂಟಿಂಗ್ ಶೀಘ್ರ ಆರಂಭವಾಗಲಿದೆ.

    ನಾಯಕಿಯಾಗಿ ರಶ್ಮಿಕಾ

ಬಾಲಿವುಡ್​ನ ವರ್ಸಟೈಲ್ ನಟರಲ್ಲಿ ಒಬ್ಬರಾದ ಶಾಹಿದ್ ಕಪೂರ್ ಅವರ ಹೊಸ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಂತೆ.

    ನಟ ಶಾಹಿದ್ ಕಪೂರ್

ಶಾಹಿದ್ ಕಪೂರ್ ಥ್ರಿಲ್ಲರ್ ಕತೆಯೊಂದರಲ್ಲಿ ನಾಯಕನಾಗಿ ನಟಿಸುತ್ತಿದ್ದು, ಈ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ನಾಯಕಿ.

   ರೊಮ್ಯಾಂಟಿಕ್ ಥ್ರಿಲ್ಲರ್

ರಶ್ಮಿಕಾ ಮಂದಣ್ಣ ಪ್ರಸ್ತುತ ಮೂರು ತೆಲುಗು, ಒಂದು ತಮಿಳು ಹಾಗೂ ಎರಡು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

 ಹಲವು ಸಿನಿಮಾ ಕೈಯಲ್ಲಿ

ರಶ್ಮಿಕಾ ಮತ್ತು ಸಲ್ಮಾನ್ ಖಾನ್ ನಟನೆಯ ‘ಸಿಖಂಧರ್’ ಸಿನಿಮಾ ಇಂದಷ್ಟೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

     ‘ಸಿಖಂಧರ್’ ಸಿನಿಮಾ