ಮತ್ತೊಂದು ಹಿಟ್ ನೀಡುವ ಹಾದಿಯಲ್ಲಿ ರಶ್ಮಿಕಾ ಮಂದಣ್ಣ

18 June 2025

By  Manjunatha

ಕನ್ನಡದ ನಟಿ ರಶ್ಮಿಕಾ ಮಂದಣ್ಣ ಈಗ ಮಿಂಚುತ್ತಿರುವುದು ತೆಲುಗು, ಬಾಲಿವುಡ್ ಹಾಗೂ ತಮಿಳು ಚಿತ್ರರಂಗಗಳಲ್ಲಿ.

    ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಕಳೆದ ಒಂದೆರಡು ವರ್ಷಗಳಿಂದ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಹಿಟ್ ಮೇಲೆ ಹಿಟ್ ಕೊಡುತ್ತಿದ್ದಾರೆ.

       ಮುಟ್ಟಿದ್ದೆಲ್ಲ ಚಿನ್ನ

ರಶ್ಮಿಕಾ ಮಂದಣ್ಣ ನಟಿಸಿದ ಸತತ ಮೂರು ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಐನೂರು ಕೋಟಿಗೂ ಹೆಚ್ಚು ಗಳಿಕೆ ಮಾಡಿವೆ.

ಸತತ ಮೂರು ಸಿನಿಮಾಗಳು

ಸಲ್ಮಾನ್ ಜೊತೆಗೆ ನಟಿಸಿದ ‘ಸಿಖಂಧರ್’ ಸಿನಿಮಾ ಮಾತ್ರವೇ ತುಸು ಕಡಿಮೆ ಕಲೆಕ್ಷನ್ ಮಾಡಿತ್ತು. ಅದನ್ನು ಪೈರಸಿ ಕಾರಣ ಎನ್ನಲಾಗುತ್ತಿದೆ.

ಸಿಖಂಧರ್’ ಚಿತ್ರದ ಸೋಲು

ಇದೀಗ ಮತ್ತೊಂದು ಹಿಟ್ ಸಿನಿಮಾ ನೀಡುವ ಹಾದಿಯಲ್ಲಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

ಮತ್ತೊಂದು ಹಿಟ್ ಸಿನಿಮಾ

ರಶ್ಮಿಕಾ, ಇದೇ ಮೊದಲ ಬಾರಿಗೆ ತಮಿಳಿನ ಸ್ಟಾರ್ ನಟ ಧನುಶ್ ಜೊತೆಗೆ ನಟಿಸಿದ್ದಾರೆ. ಸಿನಿಮಾದ ಹೆಸರು ‘ಕುಬೇರ’.

ಸಿನಿಮಾದ ಹೆಸರು ‘ಕುಬೇರ’

‘ಕುಬೇರ’ ಸಿನಿಮಾ ಜೂನ್ 20 ರಂದು ಬಿಡುಗಡೆ ಆಗಲಿದ್ದು, ಅಡ್ವಾನ್ಸ್ ಬುಕಿಂಗ್ ಈಗಾಗಲೇ ಆರಂಭ ಆಗಿದೆ.

        ಅಡ್ವಾನ್ಸ್ ಬುಕಿಂಗ್

ಅಡ್ವಾನ್ಸ್ ಬುಕಿಂಗ್ ಬಹಳ ಚೆನ್ನಾಗಿ ಆಗುತ್ತಿದ್ದು, ಸಿನಿಮಾ ಪಕ್ಕಾ ಹಿಟ್ ಆಗಲಿದೆ ಎನ್ನಲಾಗುತ್ತಿದೆ. ರಶ್ಮಿಕಾ ಖಾತೆಗೆ ಇನ್ನೊಂದು ಗೆಲುವು ಸಿಗಲಿದೆ.

      ಸಿನಿಮಾ ಪಕ್ಕಾ ಹಿಟ್