ರಶ್ಮಿಕಾ ಮಂದಣ್ಣ ಹಾಡು ನೋಡಿ ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

16 July 2025

By  Manjunatha

ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್​ಫ್ರೆಂಡ್’ ಸಿನಿಮಾದ ಚಿತ್ರೀಕರಣ ಹಲವು ತಿಂಗಳುಗಳೇ ಆಗಿವೆ.

‘ದಿ ಗರ್ಲ್​ಫ್ರೆಂಡ್’ ಸಿನಿಮಾ

ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ, ಶೀಘ್ರವೇ ‘ದಿ ಗರ್ಲ್​ಫ್ರೆಂಡ್’ ಸಿನಿಮಾದ ಅಪ್​ಡೇಟ್ ಒಂದು ಹೊರಬೀಳಲಿದೆ ಎಂದಿದ್ದರು.

    ನಟಿ ರಶ್ಮಿಕಾ ಮಂದಣ್ಣ

ಇದೀಗ ‘ದಿ ಗರ್ಲ್​ಫ್ರೆಂಡ್’ ಸಿನಿಮಾದ ಹೊಸ ಹಾಡೊಂದು, ಅದರಲ್ಲೂ ವಿಡಿಯೋ ಹಾಡು ಬಿಡುಗಡೆ ಆಗಿದೆ.

ವಿಡಿಯೋ ಹಾಡು ಬಿಡುಗಡೆ

‘ನದಿಯೇ’ ಎಂಬ ಈ ಹಾಡು ಕೇಳಲು ಇಂಪಾಗಿದೆ. ಹಾಡಿಗೆ ಹಷೀಮ್ ಅವರು ಸಂಗೀತ ನೀಡಿದ್ದಾರೆ.

ಹಾಡು ಕೇಳಲು ಇಂಪಾಗಿದೆ

ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಮತ್ತು ಕನ್ನಡದ ನಟ ದೀಕ್ಷಿತ್ ಶೆಟ್ಟಿ ಅದ್ಭುತವಾಗಿ, ಎಕ್ಸ್​ಪ್ರೆಸಿವ್ ಆಗಿ ಡ್ಯಾನ್ಸ್ ಮಾಡಿದ್ದಾರೆ.

ಕನ್ನಡದ ನಟ ದೀಕ್ಷಿತ್ ಶೆಟ್ಟಿ

ಸಾಲ್ಸಾ ಮಾದರಿಯ ಡ್ಯಾನ್ಸ್ ಅನ್ನು ರಶ್ಮಿಕಾ ಮಂದಣ್ಣ ದೀಕ್ಷಿತ್ ಶೆಟ್ಟಿ ಮಾಡಿದ್ದು, ಈ ಡ್ಯಾನ್ಸ್ ಕಂಪೋಸಿಷನ್ ಭಿನ್ನವಾಗಿದೆ.

ಸಾಲ್ಸಾ ಮಾದರಿಯ ಡ್ಯಾನ್ಸ್

ವಿಡಿಯೋ ನೋಡಿದ ಹಲವು ಮಂದಿಗೆ ರಶ್ಮಿಕಾ ಮತ್ತು ದೀಕ್ಷಿತ್ ಶೆಟ್ಟಿ ಅವರುಗಳ ಡ್ಯಾನ್ಸ್ ಇಷ್ಟವಾಗಿದೆ. ಸೆಟ್ ಸಹ ಇಷ್ಟವಾಗಿದೆ.

ರಶ್ಮಿಕಾ ಮತ್ತು ದೀಕ್ಷಿತ್ ಶೆಟ್ಟಿ

ಆದರೆ ಇನ್ನು ಕೆಲವರು ಡ್ಯಾನ್ಸ್ನಲ್ಲಿ ಪರಿಪೂರ್ಣತೆ ಅಥವಾ ನಿಖರತೆ ಇಲ್ಲ, ಸ್ಟೆಪ್ಸ್ ಇನ್ನೂ ಬೆಟರ್ ಆಗಬಹುದಿತ್ತು ಎಂದಿದ್ದಾರೆ.

    ಟೀಕೆ ಸಹ ಮಾಡಿದ್ದಾರೆ