ಚಿತ್ರೀಕರಣಕ್ಕೆ ಮರಳುವೆ ಎಂದ ರಶ್ಮಿಕಾ, ಆದರೆ ಈ ವಿಷಯಗಳ ಮಿಸ್ ಮಾಡಿಕೊಳ್ತಾರಂತೆ

30 AUG 2026

By  Manjunatha

ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ನಟಿ, ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

 ಹಲವು ಭಾಷೆಗಳ ಸಿನಿಮಾ

ಆದರೆ ರಶ್ಮಿಕಾ ಮಂದಣ್ಣ ಕಳೆದ ಒಂದು ತಿಂಗಳಿನಿಂದಲೂ ಚಿತ್ರೀಕರಣದಲ್ಲಿ ಭಾಗಿ ಆಗಿಲ್ಲ, ಮನೆಯಲ್ಲೇ ಇದ್ದಾರೆ.

ಚಿತ್ರೀಕರಣಕ್ಕೆ ಭಾಗಿ ಆಗಿಲ್ಲ

ರಶ್ಮಿಕಾ ಮಂದಣ್ಣ ಚಿತ್ರೀಕರಣದ ವೇಳೆ ಸೊಂಟಕ್ಕೆ ಗಾಯ ಮಾಡಿಕೊಂಡಿದ್ದರು. ಹಾಗಾಗಿ ಅವರು ರೆಸ್ಟ್​​ನಲ್ಲಿದ್ದರು.

 ಚಿತ್ರೀಕರಣದ ವೇಳೆ ಗಾಯ

ಇದೀಗ ಇನ್​​ಸ್ಟಾಗ್ರಾಂ ಪೋಸ್ಟ್ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ಚಿತ್ರೀಕರಣಕ್ಕೆ ಮರಳುವೆ ಎಂದಿದ್ದಾರೆ.

    ಇನ್​​ಸ್ಟಾಗ್ರಾಂ ಪೋಸ್ಟ್

ಆದರೆ ಶೂಟಿಂಗ್​​ಗೆ ಬರುವ ಮೂಲಕ ಕೆಲವು ವಿಷಯಗಳನ್ನು ಬಹಳ ಮಿಸ್ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

ಮಿಸ್ ಮಾಡಿಕೊಳ್ಳುವುದಾಗಿ

ನಿತ್ಯ ದೇವರಿಗೆ ಪೂಜೆ ಮಾಡುವುದು, ತಂಗಿಯೊಟ್ಟಿಗೆ, ಕುಟುಂಬದೊಟ್ಟಿಗೆ ಕಾಲ ಕಳೆಯುವುದನ್ನು ಮಿಸ್ ಮಾಡಿಕೊಳ್ಳುವೆ ಎಂದಿದ್ದಾರೆ.

ಏನು ಮಿಸ್ ಮಾಡಿಕೊಳ್ತಾರೆ

ಜೊತೆಗೆ ಮುದ್ದಿನ ನಾಯಿಗಳ ಜೊತೆಗೆ ಆಟ ಆಡುವುದು, ಡ್ರಾಯಿಂಗ್ ಮಾಡುವುದು, ಪುಸ್ತಕ ಓದುವುದನ್ನು ಮಿಸ್ ಮಾಡಿಕೊಳ್ಳುವೆ ಎಂದಿದ್ದಾರೆ.

         ಮನೆ ವಿಷಯಗಳು

ತಾವು ಮಿಸ್ ಮಾಡಿಕೊಳ್ಳಲಿರುವ ವಿಷಯಗಳ, ವಸ್ತುಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ