ಮತ್ತೆ ಕನ್ನಡಕ್ಕೆ ಬಂದ ಬಾಲಿವುಡ್ ನಟಿ ರವೀನಾ ಟಂಡನ್

09 OCT 2026

By  Manjunatha

ಬಾಲಿವುಡ್ ಹಿರಿಯ ನಟಿ ರವೀನಾ ಟಂಡನ್, ಕನ್ನಡ ಚಿತ್ರರಂಗಕ್ಕೆ ಹೊಸಬರೇನೂ ಅಲ್ಲ.

    ನಟಿ ರವೀನಾ ಟಂಡನ್

ರವೀನಾ ಟಂಡನ್ 1999 ರಲ್ಲಿ ಬಿಡುಗಡೆ ಆಗಿದ್ದ ‘ಉಪೇಂದ್ರ’ ಸಿನಿಮಾನಲ್ಲಿ ನಟನೆ ಮಾಡಿದ್ದರು.

  ‘ಉಪೇಂದ್ರ’ ಸಿನಿಮಾನಲ್ಲಿ

‘ಉಪೇಂದ್ರ’ ಸಿನಿಮಾದ ‘ಮಸ್ತ್ ಮಸ್ತ್ ಹುಡುಗಿ ಬಂದ್ಳು’ ಹಾಡು ಭಾರಿ ಜನಪ್ರಿಯ ಆಗಿತ್ತು.

     ‘ಮಸ್ತ್ ಮಸ್ತ್ ಹುಡುಗಿ’

ಆ ಬಳಿಕ 2022 ರಲ್ಲಿ ರಿಲೀಸ್ ಆದ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾನಲ್ಲಿ ರಮಿಕಾ ಸೇನ್ ಪಾತ್ರದಲ್ಲಿ ನಟನೆ ಮಾಡಿದ್ದರು.

     ‘ಕೆಜಿಎಫ್ ಚಾಪ್ಟರ್ 2’

ರವೀನಾ ಅವರ ರಮಿಕಾ ಸೇನ್ ಪಾತ್ರ ರವೀನಾ ಟಂಡನ್ ಅವರಿಗೆ ದೊಡ್ಡ ಜನಪ್ರಿಯತೆ ತಂದು ಕೊಟ್ಟಿತು.

     ರಮಿಕಾ ಸೇನ್ ಪಾತ್ರ

ಇದೀಗ ರವೀನಾ ಟಂಡನ್ ಮತ್ತೊಂದು ಸಿನಿಮಾಕ್ಕಾಗಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದು, ಶಿವಣ್ಣನ ಜೊತೆ ನಟಿಸುತ್ತಿದ್ದಾರೆ.

      ಕನ್ನಡ ಚಿತ್ರರಂಗಕ್ಕೆ

ಶಿವರಾಜ್ ಕುಮಾರ್ ನಟಿಸುತ್ತಿರುವ ‘ಎ ಫಾರ್ ಆನಂದ್’ ಸಿನಿಮಾನಲ್ಲಿ ರವೀನಾ ಟಂಡನ್ ನಟನೆ ಮಾಡುತ್ತಿದ್ದಾರೆ.

      ‘ಎ ಫಾರ್ ಆನಂದ್’

‘ಎ ಫಾರ್ ಆನಂದ್’ ಸಿನಿಮಾನಲ್ಲಿ ಶಿವರಾಜ್ ಕುಮಾರ್ ಎದುರು ನಾಯಕಿಯಾಗಿ ರವೀನಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  ನಾಯಕಿಯಾಗಿ ರವೀನಾ