ದಕ್ಷಿಣದತ್ತ ಬಂದ ಮತ್ತೊಬ್ಬ ಬಾಲಿವುಡ್ ಸ್ಟಾರ್​ ನಟಿಯ ಪುತ್ರಿ

16 NOV 2025

By  Manjunatha

ಬಾಲಿವುಡ್​​ನಲ್ಲಿ ನಟಿಯರು ಕಾಲಿಡುವ ಮುನ್ನ, ದಕ್ಷಿಣ ಭಾರತ ಚಿತ್ರರಂಗವನ್ನು ಲಾಂಚ್​​ ಪ್ಯಾಡ್​​ನಂತೆ ಬಳಸುತ್ತಿದ್ದಾರೆ.

  ದಕ್ಷಿಣ ಭಾರತ ಚಿತ್ರರಂಗ

ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ ಇನ್ನೂ ಹಲವಾರು ನಟಿಯರು ದಕ್ಷಿಣದಲ್ಲಿ ನಟಿಸಿಯೇ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದು.

      ಬಾಲಿವುಡ್​ಗೆ ಎಂಟ್ರಿ

ಇದೀಗ ಬಾಲಿವುಡ್​ನ ಸ್ಟಾರ್ ನಟ-ನಟಿಯರು ಸಹ ತಮ್ಮ ಮಕ್ಕಳನ್ನು ದಕ್ಷಿಣ ಭಾರತ ಚಿತ್ರರಂಗದತ್ತ ದೂಡುತ್ತಿದ್ದಾರೆ.

    ಸ್ಟಾರ್ ನಟ-ನಟಿಯರು

ಸ್ಟಾರ್ ನಟಿ ರವೀನಾ ಟಂಡನ್ ಬಾಲಿವುಡ್ ಸ್ಟಾರ್ ನಟಿ ಆಗಿದ್ದರು. ದಕ್ಷಿಣದ ಸಿನಿಮಾಗಳಲ್ಲಿಯೂ ಇವರು ನಟಿಸಿದ್ದಾರೆ.

    ನಟಿ ರವೀನಾ ಟಂಡನ್

ಇದೀಗ ರವೀನಾ ಟಂಡನ್ ಅವರ ಪುತ್ರಿ ರಶಾ ತಂಡಾನಿ ಅವರು ಮೊದಲ ಬಾರಿಗೆ ದಕ್ಷಿಣದ ಸಿನಿಮಾನಲ್ಲಿ ನಟಿಸಲಿದ್ದಾರೆ.

   ರವೀನಾ ಟಂಡನ್ ಪುತ್ರಿ

ರಶಾ ತಂಡಾನಿ ಈಗಾಗಲೇ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ ಆದರೆ ಅಲ್ಲಿ ಅವರಿಗೆ ಗೆಲುವು ಸಿಕ್ಕಿಲ್ಲ.

   ಅವರಿಗೆ ಗೆಲುವು ಸಿಕ್ಕಿಲ್ಲ

ಇದೀಗ ತೆಲುಗಿನ ಹೊಸ ಸಿನಿಮಾ ಒಂದನ್ನು ರಶಾ ತಂಡಾನಿ ಒಪ್ಪಿಕೊಂಡಿದ್ದು, ಇಲ್ಲಿ ಅವರಿಗೆ ಅದೃಷ್ಟ ಸಿಗುತ್ತದೆಯೇ ನೋಡಬೇಕಿದೆ.

ಅದೃಷ್ಟ ಒಲಿಯುತ್ತದೆಯೇ

ರಶಾ ತಂಡಾನಿ, ಮಹೇಶ್ ಬಾಬು ಅವರ ಅಕ್ಕನ ಮಗ ಗಟ್ಟಿಮನೇನಿ ರಮೇಶ್ ಬಾಬು ಸಿನಿಮಾನಲ್ಲಿ ನಾಯಕಿ ಆಗಿ ನಟಿಸಲಿದ್ದಾರೆ.

ಮಹೇಶ್ ಬಾಬು ಸಂಬಂಧಿ