ಉದ್ಯಮ ಆರಂಭಿಸಿದ ಸುಶಾಂತ್ ಮಾಜಿ ಗೆಳತಿ ರಿಯಾ, ಇದೆ ಬಲವಾದ ಕಾರಣ

08 June 2025

By  Manjunatha

ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ಇದೀಗ ಹೊಸ ಉದ್ಯಮವೊಂದನ್ನು ಸ್ಥಾಪಿಸಿದ್ದಾರೆ.

    ಸುಶಾಂತ್ ಮಾಜಿ ಗೆಳತಿ

ಸುಶಾಂತ್ ಸಿಂಗ್ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ರಿಯಾ, ತಮ್ಮ ಸಹೋದರನ ಜೊತೆ ಸೇರಿ ಉದ್ಯಮ ಆರಂಭಿಸಿದ್ದಾರೆ.

  ಜೈಲಿಗೆ ಹೋಗಿದ್ದ ರಿಯಾ

ರಿಯಾ ಜೈಲಿಗೆ ಹೋಗುವ ಮುನ್ನ ಟಿ-ಶರ್ಟ್​​ನಲ್ಲಿ ಬರೆದ ಸಾಲುಗಳ ಮೂಲಕ ತಮ್ಮ ಮನದ ಮಾತು ಹೇಳಿದ್ದರು.

   ಟಿ-ಶರ್ಟ್​​ ಸಾಲುಗಳು

ಇದೀಗ ಅದೇ ಐಡಿಯಾ ಇಟ್ಟುಕೊಂಡು ಟಿ-ಶರ್ಟ್ ಬ್ರ್ಯಾಂಡ್ ಒಂದನ್ನು ರಿಯಾ ಚಕ್ರವರ್ತಿ ಸ್ಥಾಪಿಸಿದ್ದಾರೆ.

ಹೊಸ ಟಿ-ಶರ್ಟ್ ಬ್ರ್ಯಾಂಡ್

ತಮ್ಮ ಸಂಸ್ಥೆಗೆ ‘ಚಾಪ್ಟರ್ 2’ ಎಂದು ರಿಯಾ ಹೆಸರಿಟ್ಟಿದ್ದು, ವಾಕ್ಯಗಳನ್ನು ಹೊಂದಿರುವ ಟಿ-ಶರ್ಟ್ ಮಾರಾಟ ಇವರ ಗುರಿ.

‘ಚಾಪ್ಟರ್ 2’ ಎಂದು ಹೆಸರು

ದನಿ ಇಲ್ಲದಾಗ ನಮ್ಮ ಟಿ-ಶರ್ಟ್ ಮೂಲಕ ನಾವಂದುಕೊಂಡಿದ್ದನ್ನು ಹೇಳಿದೆವು, ನಮ್ಮಂತೆ ದನಿ ಇಲ್ಲದವರಿಗಾಗಿ ಈ ಟಿ-ಶರ್ಟ್​ಗಳು ಎಂದಿದ್ದಾರೆ.

      ಇದೆ ವಿಶೇಷ ಕಾರಣ

ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ರಿಯಾ ಚಕ್ರವರ್ತಿಯನ್ನು ಆರೋಪಿ ಮಾಡಲಾಗಿತ್ತು.

ಆರೋಪಿಯಾಗಿದ್ದ ರಿಯಾ

ಆದರೆ ಸಿಬಿಐ ತನಿಖೆಯಲ್ಲಿ ಸುಶಾಂತ್ ಸಿಂಗ್ ಸಾವಿಗೂ ರಿಯಾ ಚಕ್ರವರ್ತಿಗೂ ನಂಟಿಲ್ಲ ಎಂಬುದು ಸಾಬೀತಾಗಿದೆ.

ಸಿಬಿಐ ತನಿಖೆಯಲ್ಲಿ ಸ್ಪಷ್ಟ