ನರೇಂದ್ರ ಮೋದಿ ನೆಕ್​ಲೆಸ್ ಧರಿಸಿ ಕಾನ್ ರೆಡ್ ಕಾರ್ಪೆಟ್​ ಮೇಲೆ ನಡೆದ ನಟಿ

20 May 2025

By  Manjunatha

ನಟಿಯೊಬ್ಬಾಕೆ ಕಾನ್ ಫಿಲಮ್ ಫೆಸ್ಟ್​ನ ರೆಡ್ ಕಾರ್ಪೆಟ್ ಮೇಲೆ ಮೋದಿ ಚಿತ್ರ ಕೊರಳಲ್ಲಿ ಧರಿಸಿ ಗಮನ ಸೆಳೆದಿದ್ದಾರೆ.

    ಮೋದಿ ಚಿತ್ರ ಕೊರಳಲ್ಲಿ

ನಟಿ ರುಚಿ ಗುಜ್ಜರ್, ಮೋದಿ ಅವರ ಚಿತ್ರವಿರುವ ಆಭರಣವನ್ನು ಕೊರಳಲ್ಲಿ ಧರಿಸಿ ಗಮನ ಸೆಳೆದಿದ್ದಾರೆ.

        ನಟಿ ರುಚಿ ಗುಜ್ಜರ್

ಅವರು ಕಾನ್ ಫೆಸ್ಟ್​ನ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವಾಗ ತಮ್ಮ ಗ್ಲಾಮರಸ್ ಉಡುಗೆಗೆ ಮೋದಿ ಚಿತ್ರದ ನೆಕ್​ಲೆಸ್ ಧರಿಸಿದ್ದರು.

     ರೆಡ್ ಕಾರ್ಪೆಟ್ ಮೇಲೆ

ಈ ನೆಕ್​ಲೆಸ್, ಧೈರ್ಯ, ಶಕ್ತಿ, ದೂರದರ್ಶಿತ್ವ, ರಾಷ್ಟ್ರೀಯತೆಯ ಪ್ರತೀಕ ಎಂದಿದ್ದಾರೆ ನಟಿ ರುಚಿ ಗುಜ್ಜರ್.

       ಮೋದಿ ಚಿತ್ರ ಏಕೆ?

ರುಚಿ ಗುಜ್ಜರ್ ಧರಿಸಿರುವ ಈ ಗ್ಲಾಮರಸ್ ಉಡುಪನ್ನು ಜರಿಭಾರಿ ಬ್ರ್ಯಾಂಡ್​ನ ರಾಮ್ ಅವರು ವಿನ್ಯಾಸ ಮಾಡಿದ್ದಾರೆ.

     ವಿನ್ಯಾಸಗಾರ  ರಾಮ್ 

ರುಚಿ ಗುಜ್ಜರ್ ಮಾದಕವಾದ ಉಡುಗೆ ತೊಟ್ಟು ಅದರ ಮೇಲೆ ಮೋದಿ ಚಿತ್ರವನ್ನು ಧರಿಸುವುದಕ್ಕೆ ಕೆಲವರ ವಿರೋಧವೂ ವ್ಯಕ್ತವಾಗಿದೆ.

ವಿರೋಧವೂ ವ್ಯಕ್ತವಾಗಿದೆ

ರುಚಿ ಗುಜ್ಜರ್ ರಾಜಸ್ಥಾನ ಮೂಲದವರು ಈಗ ಮುಂಬೈನಲ್ಲಿ ನೆಲೆಸಿದ್ದಾರೆ. ಸಿನಿಮಾ, ಮ್ಯೂಸಿಕ್​ ವಿಡಿಯೋನಲ್ಲಿ ನಟಿಸಿದ್ದಾರೆ.

ರಾಜಸ್ಥಾನ ಮೂಲದವರು

ರುಚಿ ಗುಜ್ಜರ್ ಸ್ವತಃ ನರೇಂದ್ರ ಮೋದಿ ಅವರ ಅಭಿಮಾನಿ ಆಗಿದ್ದು, ಅದೇ ಕಾರಣಕ್ಕೆ ಅವರ ಚಿತ್ರವನ್ನು ಧರಿಸಿದರಂತೆ.

   ಮೋದಿಯ ಅಭಿಮಾನಿ