ಮತ್ತೆ ತೆಲುಗಿಗೆ ಹೊರಟ ರುಕ್ಮಿಣಿ ವಸಂತ್, ಸ್ಟಾರ್ ನಟನ ಸಿನಿಮಾ

13 June 2026

By  Manjunatha

ಕನ್ನಡದ ನಟಿ ರುಕ್ಮಿಣಿ ವಸಂತ್, ಈಗ ಪ್ಯಾನ್ ಇಂಡಿಯಾ ನಟಿಯಾಗುವತ್ತ ದಾಪುಗಾಲು ಹಾಕುತ್ತಿದ್ದಾರೆ.

   ಪ್ಯಾನ್ ಇಂಡಿಯಾ ನಟಿ

‘ಸಪ್ತ ಸಾಗರದಾಚೆ ಎಲ್ಲೊ’, ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಳಿಕ ಅವರ ರೇಂಜೇ ಬದಲಾಗಿದೆ.

  ನಟಿ ರೇಂಜು ಬದಲಾಗಿದೆ

ರುಕ್ಮಿಣಿ ವಸಂತ್ ಅವರಿಗೆ ಪರಭಾಷೆಗಳಿಂದಲೂ ಸಖತ್ ಆಫರ್​​ಗಳು ಒಂದರ ಹಿಂದೊಂದು ಬರುತ್ತಿವೆ.

  ಪರಭಾಷೆಗಳಿಂದ ಆಫರ್​​

ಈಗಾಗಲೇ ಅವರ ನಟನೆಯ ಒಂದು ತೆಲುಗು, ಎರಡು ತಮಿಳು ಸಿನಿಮಾ ಬಿಡುಗಡೆ ಆಗಿವೆ.

ಕೈಯಲ್ಲಿರುವ ಸಿನಿಮಾಗಳು

ಪ್ರಸ್ತುತ ಅವರು ತೆಲುಗಿನ ಸ್ಟಾರ್ ನಟ ಜೂ ಎನ್​​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

   ‘ಡ್ರ್ಯಾಗನ್’ ಸಿನಿಮಾನಲ್ಲಿ

ಇದೀಗ ರುಕ್ಮಿಣಿ ವಸಂತ್ ಅವರಿಗೆ ಹೊಸದೊಂದು ತೆಲುಗು ಸಿನಿಮಾದ ಆಫರ್ ಅರಸಿ ಬಂದಿದೆ.

   ಹೊಸ ತೆಲುಗು ಸಿನಿಮಾ

ಸ್ಟಾರ್ ನಟ ನಾನಿ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾಕ್ಕೆ ರುಕ್ಮಿಣಿ ವಸಂತ್ ಅವರೇ ನಾಯಕಿ.

 ರುಕ್ಮಿಣಿ ವಸಂತ್ ನಾಯಕಿ

ಆದರೆ ಆ ಸಿನಿಮಾನಲ್ಲಿ ನಾನಿ ನಾಯಕನಾಗಿ ನಟಿಸುತ್ತಿಲ್ಲ ಎನ್ನಲಾಗಿದ್ದು, ನಾಯಕನಿಗಾಗಿ ಹುಡುಕಾಟ ಚಾಲ್ತಿಯಲ್ಲಿದೆ.

  ನಟ ನಾನಿ ನಾಯಕನಾಗಿ

ರುಕ್ಮಿಣಿ ವಸಂತ್ ಅವರಿಗೆ ಇದು ಮೂರನೇ ತೆಲುಗು ಸಿನಿಮಾ ಆಗಿದ್ದು, ಮಹಿಳಾ ಪ್ರಧಾನ ಸಿನಿಮಾ ಇದು ಎನ್ನಲಾಗುತ್ತಿದೆ.

 ಮಹಿಳಾ ಪ್ರಧಾನ ಸಿನಿಮಾ