ಕನ್ನಡದ ನಟಿ ರುಕ್ಮಿಣಿಗೆ ತೆಲುಗಿನಲ್ಲಿ ಬೇಡಿಕೆ, ಕೈಯಲ್ಲಿರುವ ಸಿನಿಮಾಗಳೆಷ್ಟು?

23 May 2025

By  Manjunatha

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾ ಮೂಲಕ ನಟಿ ರುಕ್ಮಿಣಿ ವಸಂತ್​ ಪ್ರತಿಭೆ ದೇಶಕ್ಕೆ ಗೊತ್ತಾಗಿದೆ.

     ನಟಿ ರುಕ್ಮಿಣಿ ವಸಂತ್

ರುಕ್ಮಿಣಿ ವಸಂತ್ ಅವರಿಗೆ ಈಗ ಪರಭಾಷೆಗಳಿಂದ ಹಲವು ಸಿನಿಮಾ ಆಫರ್​ಗಳು ಬರುತ್ತಲೇ ಇವೆ.

  ಪರಭಾಷೆಗಳಿಂದ ಆಫರ್

ಜೂ ಎನ್​ಟಿಆರ್ ನಟಿಸಿ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ.

ಜೂ ಎನ್​ಟಿಆರ್ ನಾಯಕಿ

ಇಂದು (ಮೇ 23) ಬಿಡುಗಡೆ ಆದ ತಮಿಳಿನ ವಿಜಯ್ ಸೇತುಪತಿ ನಟನೆಯ ‘ಏಸ್’ ಸಿನಿಮಾನಲ್ಲಿ ರುಕ್ಮಿಣಿ ನಾಯಕಿ.

  ತಮಿಳಿನ ‘ಏಸ್’ ಸಿನಿಮಾ

ಶಿವಕಾರ್ತಿಕೇಯನ್ ನಟಿಸಿ, ಎಆರ್ ಮುರುಗದಾಸ್ ನಿರ್ದೇಶಿಸುತ್ತಿರುವ ‘ಮದ್ರಾಸಿ’ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ.

‘ಮದ್ರಾಸಿ’ ಸಿನಿಮಾ ನಾಯಕಿ

ಈಗ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಸಹ ರುಕ್ಮಿಣಿ ಅವರ ಭೇಟಿಯಾಗಿ ಮುಂದಿನ ಸಿನಿಮಾ ಮಾತುಕತೆ ನಡೆಸಿದ್ದಾರೆ.

ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರ

ತೆಲುಗಿನ ಖ್ಯಾತ ನಟ ವೆಂಕಟೇಶ್ ದಗ್ಗುಬಾಟಿ ನಟನೆಯ ಮುಂದಿನ ಸಿನಿಮಾನಲ್ಲಿ ರುಕ್ಮಿಣಿ ನಾಯಕಿಯಂತೆ.

  ನಟ ವೆಂಕಟೇಶ್ ಜೊತೆಗೆ

ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾನಲ್ಲಿಯೂ ರುಕ್ಮಿಣಿ ವಸಂತ್ ನಾಯಕಿ. ದೀಪಿಕಾ ಬದಲು ರುಕ್ಮಿಣಿಗೆ ಅವಕಾಶ ದೊರೆತಿದೆ.

ಪ್ರಭಾಸ್ ನಟನೆಯ ‘ಸ್ಪಿರಿಟ್’

ಮಣಿರತ್ನಂ ನಿರ್ದೇಶಿಸಲಿರುವ ಮುಂದಿನ ಮಹಿಳಾ ಪ್ರಧಾನ ಸಿನಿಮಾಕ್ಕೂ ರುಕ್ಮಿಣಿ ವಸಂತ್ ನಾಯಕಿ ಎನ್ನಲಾಗುತ್ತಿದೆ.

 ಮಣಿರತ್ನಂ ಸಿನಿಮಾನಲ್ಲಿ