ಬಾಲಿವುಡ್​ಗೆ ಪದಾರ್ಪಣೆ ಮಾಡಲಿದ್ದಾರೆಯೇ ನಟಿ ರುಕ್ಮಿಣಿ ವಸಂತ್​​?

25 OCT 2025

By  Manjunatha

ಕನ್ನಡದ ನಟಿ ರುಕ್ಮಿಣಿ ವಸಂತ್​​ಗೆ ಅದೃಷ್ಟ ಖುಲಾಯಿಸಿದೆ. ಅವರ ಸಿನಿಮಾಗಳು ಬ್ಲಾಕ್ ಬಸ್ಟರ್​​ಗಳಾಗುತ್ತಿವೆ.

    ನಟಿ ರುಕ್ಮಿಣಿ ವಸಂತ್​​

ರುಕ್ಮಿಣಿ ವಸಂತ್ ಅವರು ತಮ್ಮ ನಟನೆ ಮತ್ತು ಸೌಂದರ್ಯದಿಂದ ಪ್ಯಾನ್ ಇಂಡಿಯಾ ಲೆವೆಲ್​​​ನಲ್ಲಿ ಹೆಸರು ಮಾಡಿದ್ದಾರೆ.

       ಪ್ಯಾನ್ ಇಂಡಿಯಾ

ರುಕ್ಮಿಣಿ ವಸಂತ್ ನಟನೆಯ ‘ಕಾಂತಾರ: ಚಾಪ್ಟರ್ 1’ ಸಿನಿಮಾ ದೊಡ್ಡ ಹಿಟ್ ಆಗಿದ್ದು, 1000 ಕೋಟಿ ಗಳಿಸಲಿಕ್ಕಿದೆ.

     ಕಾಂತಾರ: ಚಾಪ್ಟರ್ 1

ರುಕ್ಮಿಣಿ ವಸಂತ್ ಇದೀಗ ಜೂ ಎನ್​​ಟಿಆರ್ ನಟನೆಯ ಹೊಸ ಸಿನಿಮಾನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

 ಜೂ ಎನ್​​ಟಿಆರ್ ಸಿನಿಮಾ

ತಮಿಳಿನಿಂದಲೂ ಸಹ ರುಕ್ಮಿಣಿ ವಸಂತ್ ಅವರಿಗೆ ಕೆಲ ದೊಡ್ಡ ಸಿನಿಮಾ ಅವಕಾಶಗಳು ಅರಸಿ ಬಂದಿವೆ.

ದೊಡ್ಡ ಸಿನಿಮಾ ಅವಕಾಶ

ಇದೆಲ್ಲದರ ನಡುವೆ ಇದೀಗ ರುಕ್ಮಿಣಿ ವಸಂತ್ ಅವರಿಗೆ ಬಾಲಿವುಡ್​ನಿಂದಲೂ ಬುಲಾವ್ ಬಂದಿದೆ ಎನ್ನಲಾಗುತ್ತಿದೆ.

ಬಾಲಿವುಡ್​ನಿಂದ ಬುಲಾವ್

ಬಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆಯೊಂದು ಹೊಸ ಸಿನಿಮಾಕ್ಕೆ ರುಕ್ಮಿಣಿ ಅವರಿಗೆ ಅವಕಾಶ ನೀಡಿದೆ.

 ದೊಡ್ಡ ನಿರ್ಮಾಣ ಸಂಸ್ಥೆ

ಆದರೆ ತಮ್ಮ ಮುಗ್ಧ ಮತ್ತು ಸ್ನಿಗ್ಧ ಸೌಂದರ್ಯದಿಂದ ಹೆಸರು ಮಾಡಿದ ರುಕ್ಮಿಣಿ, ಬಾಲಿವುಡ್​ನ ಗ್ಲಾಮರ್ ಲೋಕಕ್ಕೆ ಒಗ್ಗಿಕೊಳ್ಳುತ್ತಾರಾ?

       ಗ್ಲಾಮರ್ ಲೋಕಕ್ಕೆ