ಜೂ ಎನ್​ಟಿಆರ್ ಸಿನಿಮಾ ತಂಡ ಸೇರಿದ ರುಕ್ಮಿಣಿ, ಖುಷಿ ಹಂಚಿಕೊಂಡ ನಟಿ

20 June 2025

By  Manjunatha

ಕನ್ನಡದ ನಟಿ ರುಕ್ಮಿಣಿ ವಸಂತ್ ಈಗ ಪರಭಾಷೆಗಳಲ್ಲೂ ಒಂದರ ಹಿಂದೊಂದು ಅವಕಾಶ ಬಾಚಿಕೊಳ್ಳುತ್ತಿದ್ದಾರೆ.

     ನಟಿ ರುಕ್ಮಿಣಿ ವಸಂತ್

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಬಳಿಕ ರುಕ್ಮಿಣಿ ವಸಂತ್ ಅದೃಷ್ಟ ಬದಲಾಗಿದೆ. ಸ್ಟಾರ್ ನಟರೊಟ್ಟಿಗೆ ನಟಿಸುವ ಅವಕಾಶ ಅವರಿಗೆ ದೊರೆತಿದೆ.

 ಸಪ್ತ ಸಾಗರದಾಚೆ ಎಲ್ಲೊ

ರುಕ್ಮಿಣಿ ವಸಂತ್, ಜೂ ಎನ್​ಟಿಆರ್ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಲಿರುವ ಸುದ್ದಿ ಕಳೆದ ತಿಂಗಳೇ ಹರಿದಾಡಿತ್ತು.

ಜೂ ಎನ್​ಟಿಆರ್ ಸಿನಿಮಾ

ಇದೀಗ ರುಕ್ಮಿಣಿ ವಸಂತ್ ಭಿನ್ನವಾಗಿ ಈ ಸುದ್ದಿ ಖಾತ್ರಿ ಪಡಿಸಿದ್ದಾರೆ. ಜೂ ಎನ್​ಟಿಆರ್ ಸಿನಿಮಾ ಸೆಟ್​ ಅನ್ನು ಸಹ ಸೇರಿದ್ದಾರೆ.

  ಸುದ್ದಿ ಖಾತ್ರಿ ಪಡಿಸಿದ್ದಾರೆ

ರುಕ್ಮಿಣಿ ವಸಂತ್, ಹುಲಿಯ ಚಿತ್ರಗಳುಳ್ಳ ಟಿ-ಶರ್ಟ್ ಧರಿಸಿ ಫೊಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹುಲಿಯ ಚಿತ್ರದ ಟಿ-ಶರ್ಟ್

ಜೂ ಎನ್​ಟಿಆರ್ ಅವರನ್ನು ಯಂಗ್ ಟೈಗರ್ ಎಂದೇ ಕರೆಯಲಾಗುತ್ತದೆ. ಹಾಗಾಗಿ ಹುಲಿ ಚಿತ್ರದ ಟಿ-ಶರ್ಟ್ ಧರಿಸಿದ್ದಾರೆ.

   ಯಂಗ್ ಟೈಗರ್ jr NTR

ಪ್ರಶಾಂತ್ ನೀಲ್ ನಿರ್ದೇಶಿಸಿ, ಜೂ ಎನ್​ಟಿಆರ್ ನಟಿಸುತ್ತಿರುವ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನ

ಸಿನಿಮಾದ ಚಿತ್ರೀಕರಣ ಕುಂದಾಪುರದಲ್ಲಿ ಶುರುವಾಗಿತ್ತು. ಈಗ ರುಕ್ಮಿಣಿ ವಸಂತ್ ಅವರು ಸಹ ಸಿನಿಮಾ ತಂಡ ಸೇರಿಕೊಂಡಿದ್ದಾರೆ.

ಕುಂದಾಪುರದಲ್ಲಿ ಶೂಟಿಂಗ್