ಮಣಿರತ್ನಂ ಜೊತೆ ಕೆಲಸ ಮಾಡುವ ಅವಕಾಶ ಕೈತಪ್ಪಿತೇ ರುಕ್ಮಿಣಿ ವಸಂತ್​​ಗೆ

01 AUG 2026

By  Manjunatha

ಮಣಿರತ್ನಂ ಭಾರತದ ಸ್ಟಾರ್ ನಿರ್ದೇಶಕ. ಅವರೊಟ್ಟಿಗೆ ಕೆಲಸ ಮಾಡುವುದು ಹಲವು ನಟ-ನಟಿಯರ ಆಸೆ.

ಭಾರತದ ಸ್ಟಾರ್ ನಿರ್ದೇಶಕ

ಈಗ ಪರಭಾಷೆ ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡದ ನಟಿ ರುಕ್ಮಿಣಿ ವಸಂತ್ ಅವರಿಗೂ ಅದೇ ಆಸೆ ಇದೆ.

  ಪರಭಾಷೆ ಚಿತ್ರರಂಗದಲ್ಲಿ

ಮಣಿರತ್ನಂ ತನ್ನ ಮೆಚ್ಚಿನ ನಿರ್ದೇಶಕ, ಅವರೊಟ್ಟಿಗೆ ಕೆಲಸ ಮಾಡುವ ಆಸೆ ತಮಗೆ ಇದೆ ಎಂದು ರುಕ್ಮಿಣಿ ಹೇಳಿದ್ದರು.

     ಕೆಲಸ ಮಾಡುವ ಆಸೆ

ಅದರಂತೆ ಮಣಿರತ್ನಂ ಮುಂದಿನ ಸಿನಿಮಾನಲ್ಲಿ ವಿಜಯ್ ಸೇತುಪತಿ ಜೊತೆ ರುಕ್ಮಿಣಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

 ವಿಜಯ್ ಸೇತುಪತಿ ಜೊತೆ

ಮಣಿರತ್ನಂ-ವಿಜಯ್ ಸೇತುಪತಿ ಸಿನಿಮಾನಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ರುಕ್ಮಿಣಿ ವಸಂತ್ ಅವರ ಕೈತಪ್ಪಿದೆ.

    ಮಣಿರತ್ನಂ-ವಿಜಯ್

ಮಣಿರತ್ನಂ ಹಾಗೂ ವಿಜಯ್ ಸೇತುಪತಿ ಅವರ ಸಿನಿಮಾನಲ್ಲಿ ಸಾಯಿ ಪಲ್ಲವಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ.

   ಸಾಯಿ ಪಲ್ಲವಿ ನಾಯಕಿ

ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭ ಸಹ ಆಗಿದ್ದು, ಭರದಿಂದ ಚಿತ್ರೀಕರಣ ಚಾಲ್ತಿಯಲ್ಲಿ ಸಹ ಇದೆ.

     ಚಿತ್ರೀಕರಣ ಪ್ರಾರಂಭ 

ರುಕ್ಮಿಣಿ ವಸಂತ್ ಅವರು ಬೇರೆ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಬಹಳ ಬ್ಯುಸಿ ಆಗಿದ್ದಾರೆ ನಟಿ.

 ಬಹಳ ಬ್ಯುಸಿ ನಟಿ ರುಕ್ಮಿಣಿ