ತಮಿಳು ಸಿನಿಮಾ ಟ್ರೈಲರ್​​ ನಲ್ಲಿ ಗಮನ ಸೆಳೆದ ರುಕ್ಮಿಣಿ ವಸಂತ್

24 AUG 2025

By  Manjunatha

ರುಕ್ಮಿಣಿ ವಸಂತ್ ಕನ್ನಡದ ನಟಿ, ಇತ್ತೀಚೆಗೆ ರುಕ್ಮಿಣಿ ವಸಂತ್ ಪರಭಾಷೆ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ.

     ನಟಿ ರುಕ್ಮಿಣಿ ವಸಂತ್

ಹಾಗೆಂದು ಕನ್ನಡ ಸಿನಿಮಾಗಳ ಮರೆತಿಲ್ಲ. ‘ಕಾಂತಾರ’, ‘ಟಾಕ್ಸಿಕ್’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

 ಕನ್ನಡ ಸಿನಿಮಾ ಮರೆತಿಲ್ಲ

ಕನ್ನಡದ ಜೊತೆಗೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿಯೂ ಸಹ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ.

  ತೆಲುಗು ಹಾಗೂ ತಮಿಳು

ಈಗಾಗಲೇ ಕೆಲವು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ರುಕ್ಮಿಣಿ ನಟಿಸಿದ್ದು, ಇದೀಗ ರುಕ್ಮಿಣಿ ನಟನೆಯ ಹೊಸ ತಮಿಳು ಸಿನಿಮಾ ಬಿಡುಗಡೆ ಆಗುತ್ತಿದೆ.

   ಹೊಸ ತಮಿಳು ಸಿನಿಮಾ

ಶಿವಕಾರ್ತಿಕೇಯನ್ ನಟನೆಯ ‘ಮದರಾಸಿ’ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.

      ‘ಮದರಾಸಿ’ ಸಿನಿಮಾ

ಸಿನಿಮಾದ ಟ್ರೈಲರ್ ಮತ್ತು ಹಾಡೊಂದು ಇದೀಗ ಬಿಡುಗಡೆ ಆಗಿದ್ದು, ರುಕ್ಮಿಣಿಯ ನಟನೆ ಗಮನ ಸೆಳೆಯುತ್ತಿದೆ.

   ಟ್ರೈಲರ್ ಮತ್ತು ಹಾಡು

ಶಿವಕಾರ್ತಿಕೇಯನ್ ನಟಿಸಿರುವ ಈ ಸಿನಿಮಾ ಅನ್ನು ಎಆರ್ ಮುರುಗದಾಸ್ ನಿರ್ದೇಶನ ಮಾಡಿದ್ದಾರೆ.

 ಮುರುಗದಾಸ್ ನಿರ್ದೇಶನ

‘ಮದರಾಸಿ’ ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದು, ಸಿನಿಮಾನಲ್ಲಿ ರುಕ್ಮಿಣಿ ಸಖತ್ ಮುದ್ದಾಗಿ ಕಾಣುತ್ತಿದ್ದಾರೆ.

  ಅನಿರುದ್ಧ್ ರವಿಚಂದ್ರನ್