‘ನ್ಯಾಷನಲ್ ಕ್ರಶ್’ ಎಂದವರಿಗೆ ರುಕ್ಮಿಣಿ ವಸಂತ್ ಹೇಳಿದ್ದೇನು?

13 OCT 2025

By  Manjunatha

ಕನ್ನಡದ ರುಕ್ಮಿಣಿ ವಸಂತ್ ಅವರ ಪ್ರತಿಭೆ, ಸೌಂದರ್ಯವನ್ನು ಇಡೀ ದೇಶವೇ ಇದೀಗ ಗುರುತಿಸುತ್ತಿದೆ.

      ನಟಿ ರುಕ್ಮಿಣಿ ವಸಂತ್

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾ ಮೂಲಕವೇ ಸದ್ದು ಮಾಡಿದ್ದ ರುಕ್ಮಿಣಿ ಈಗ ‘ಕಾಂತಾರ’ದ ಮೂಲಕ ಮತ್ತಷ್ಟು ಜನಪ್ರಿಯರಾಗಿದ್ದಾರೆ.

 ಸಪ್ತ ಸಾಗರದಾಚೆ ಎಲ್ಲೊ

‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ಅವರ ನಟನೆಯನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.

     ಕಾಂತಾರ: ಚಾಪ್ಟರ್ 1

ರುಕ್ಮಿಣಿ ವಸಂತ್ ಸೌಂದರ್ಯ, ನಟನಾ ಪ್ರತಿಭೆಗೆ ಮಾರು ಹೋಗಿ ‘ನ್ಯಾಷನಲ್ ಕ್ರಶ್’ ಎಂದು ಕರೆಯುತ್ತಿದ್ದಾರೆ.

       ‘ನ್ಯಾಷನಲ್ ಕ್ರಶ್’

ಆದರೆ ನಟಿ ರುಕ್ಮಿಣಿ ವಸಂತ್ ಅದನ್ನೆಲ್ಲ ಒಪ್ಪಿಕೊಂಡು ಸಂಭ್ರಮಿಸುತ್ತಿಲ್ಲ ಬದಲಿಗೆ ಪ್ರೌಢ ಉತ್ತರ ನೀಡಿದ್ದಾರೆ.

 ಪ್ರೌಢ ಉತ್ತರ ನೀಡಿದ್ದಾರೆ

ಪ್ರೀತಿಯಿಂದ ಹೀಗೆಲ್ಲ ಕರೆದಾಗ ಸಂತೋಶವಾಗುತ್ತದೆ. ಆದರೆ ಅದು ಶಾಶ್ವತವಲ್ಲ ಎಂಬುದು ನನಗೆ ಗೊತ್ತಿದೆ ಎಂದಿದ್ದಾರೆ.

     ರುಕ್ಮಿಣಿ ಹೇಳಿದ್ದೇನು? 

ಜನರಿಗೆ ಇಷ್ಟವಾಗುವುದು ಖುಷಿಯ ಸಂಗತಿ, ಆದರೆ ಈ ಬಿರುದುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ ರುಕ್ಮಿಣಿ.

 ಗಂಭೀರವಾಗಿ ಪರಿಗಣಸಲ್ಲ

ಪ್ರೇಕ್ಷಕರಿಗೆ ನಾನಲ್ಲ ನನ್ನ ಪಾತ್ರ ಹಿಡಿಸಿದೆ ಎಂಬುದು ನನಗೆ ಗೊತ್ತಿದೆ. ನನಗೂ ಸಹ ಅದೇ ಮುಖ್ಯವಾಗಿದೆ ಎಂದಿದ್ದಾರೆ ರುಕ್ಮಿಣಿ.

      ನನ್ನ ಪಾತ್ರ ಹಿಡಿಸಿದೆ