‘ಟಾಕ್ಸಿಕ್’ ಸಿನಿಮಾದ ಮುಖ್ಯ ಆಕರ್ಷಣೆ ಏನು? ರುಕ್ಮಿಣಿ ವಸಂತ್ ಕೊಟ್ಟರು ಉತ್ತರ

22 AUG 2026

By  Manjunatha

‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಇನ್ನೆರಡು ದಿನಗಳು ಮಾತ್ರವೇ ಬಾಕಿ ಇದೆ. ಸಿನಿಮಾದ ಟಿಕೆಟ್​ ಬಿಕರಿ ಆಗುತ್ತಿವೆ.

       ‘ಟಾಕ್ಸಿಕ್’ ಸಿನಿಮಾ

‘ಟಾಕ್ಸಿಕ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಇಂದು (ಆಗಸ್ಟ್ 22) ಹೈದರಾಬಾದ್​​ನಲ್ಲಿ ಆಯೋಜಿತವಾಗಿತ್ತು.

 ಪ್ರೀ ರಿಲೀಸ್ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ರುಕ್ಮಿಣಿ ವಸಂತ್ ಅವರು ಸಿನಿಮಾದ ಬಗ್ಗೆ ಚುಟುಕಾಗಿ ಮಾತನಾಡಿದರು.

     ನಟಿ ರುಕ್ಮಿಣಿ ವಸಂತ್

‘ಟಾಕ್ಸಿಕ್’ ಸಿನಿಮಾದ ದೊಡ್ಡತನ ಅದರ ಬಜೆಟ್, ಅದ್ಧೂರಿತನ, ಆಕ್ಷನ್​​ ಇವುಗಳಲ್ಲಿ ಮಾತ್ರವೇ ಇಲ್ಲ ಎಂದರು ರುಕ್ಮಿಣಿ.

  ನಟಿ ರುಕ್ಮಿಣಿ ಹೇಳಿದ್ದೇನು

‘ಟಾಕ್ಸಿಕ್’ ಸಿನಿಮಾದ ಮಜಾ ಇರುವುದು ಆ ಸಿನಿಮಾನಲ್ಲಿ ಅಡಕವಾಗಿರುವ ಸಂಬಂಧಗಳ ಸುಂದರತೆಯಲ್ಲಿ ಎಂದಿದ್ದಾರೆ ರುಕ್ಮಿಣಿ.

  ಸಂಬಂಧಗಳ ಸುಂದರತೆ

‘ಟಾಕ್ಸಿಕ್’ ಸಿನಿಮಾ ಮುರಿಯಲಿರುವ ಸಿದ್ಧಸೂತ್ರಗಳಲ್ಲಿ ಆ ಸಿನಿಮಾದ ಸುಂದರತೆ, ವಿಶೇಷತೆ ಅಡಗಿದೆ ಎಂದಿದ್ದಾರೆ ರುಕ್ಮಿಣಿ ವಸಂತ್.

      ‘ಟಾಕ್ಸಿಕ್’ ಸಿನಿಮಾ

‘ಟಾಕ್ಸಿಕ್’ ಸಿನಿಮಾನಲ್ಲಿ ಸಂಗೀತ ವಿಶೇಷ ಪಾತ್ರವಹಿಸಿದೆ. ಸಿನಿಮಾದ ಸಂಗೀತ ಅದ್ಭುತವಾಗಿದೆ ಎಂದಿದ್ದಾರೆ ನಟಿ ರುಕ್ಮಿಣಿ.

    ಸಂಗೀತ ವಿಶೇಷ ಪಾತ್ರ

ರುಕ್ಮಿಣಿ ವಸಂತ್ ಅವರು ‘ಟಾಕ್ಸಿಕ್’ ಸಿನಿಮಾನಲ್ಲಿ ಮೆಲೆಸ್​ಸಾ ಹೆಸರಿನ ಗಂಭೀರವಾದ ಪಾತ್ರದಲ್ಲಿ ನಟಿಸಿದ್ದಾರೆ.

 ಮೆಲೆಸ್​ಸಾ ಹೆಸರಿನ ಪಾತ್ರ