ತಮಿಳು ಸೂಪರ್ ಸ್ಟಾರ್ ನಟನ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ?

15 July 2026

By  Manjunatha

ರುಕ್ಮಿಣಿ ವಸಂತ್, ಕನ್ನಡದ ನಟಿಯಾದರೂ ಇತ್ತೀಚೆಗೆ ಪರಭಾಷೆ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.

    ಕನ್ನಡದ ನಟಿ ರುಕ್ಮಿಣಿ

‘ಸಪ್ತ ಸಾಗರದಾಚೆ ಎಲ್ಲೊ’, ‘ಕಾಂತಾರ 1’ ಸಿನಿಮಾಗಳ ಬಳಿಕ ರುಕ್ಮಿಣಿ ವಸಂತ್​​ಗೆ ಬೇಡಿಕೆ ಬಲು ಹೆಚ್ಚಾಗಿದೆ.

  ಬೇಡಿಕೆ ಬಲು ಹೆಚ್ಚಾಗಿದೆ

ರುಕ್ಮಿಣಿ ವಸಂತ್ ಅವರು ಈಗಾಗಲೇ ಕೆಲವು ಪರಭಾಷೆಯ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  ಪರಭಾಷೆಯ ಸ್ಟಾರ್ ನಟ

ಇದೀಗ ರುಕ್ಮಿಣಿ ವಸಂತ್ ಅವರಿಗೆ ತಮಿಳಿನ ಸ್ಟಾರ್ ನಟರೊಬ್ಬರ ಸಿನಿಮಾನಲ್ಲಿ ನಟಿಸುವ ಅವಕಾಶ ಅರಸಿ ಬಂದಿದೆ.

      ನಟಿಸುವ ಅವಕಾಶ

ಸೂಪರ್ ಸ್ಟಾರ್ ನಟರಾಗಿರುವ ರಜನೀಕಾಂತ್ ಅವರ ಹೊಸ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಟಿಸಲಿದ್ದಾರೆ ಎನ್ನಲಾಗಿದೆ.

      ಹೊಸ ಸಿನಿಮಾನಲ್ಲಿ

ರಜನೀಕಾಂತ್ ಅವರ ಇನ್ನೂ ಆರಂಭವಾಗದ ಹೊಸ ಸಿನಿಮಾನಲ್ಲಿ ರುಕ್ಮಿಣಿ ಅವರಿಗೆ ಪ್ರಮುಖ ಪಾತ್ರವಂತೆ.

    ರಜನೀಕಾಂತ್ ಜೊತೆಗೆ

ರುಕ್ಮಿಣಿ ವಸಂತ್ ಅವರು ರಜನೀಕಾಂತ್ ಅವರ ಪುತ್ರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

    ಪುತ್ರಿಯ ಪಾತ್ರದಲ್ಲಿ?

ಅಂದಹಾಗೆ ರುಕ್ಮಿಣಿ ವಸಂತ್ ಪ್ರಸ್ತುತ ಜೂ ಎನ್​​ಟಿಆರ್ ಜೊತೆ ಡ್ರ್ಯಾಗನ್ ಸಿನಿಮಾನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

   ಜೂ ಎನ್​​ಟಿಆರ್ ಜೊತೆ