ತೆಲುಗಿನ ಮತ್ತೊಬ್ಬ ಸ್ಟಾರ್ ಜೊತೆ ರುಕ್ಮಿಣಿ ವಸಂತ್ ಸಿನಿಮಾ, ನಿರ್ದೇಶಕ ಯಾರು?

26 May 2025

By  Manjunatha

ಕನ್ನಡದ ನಟಿ ರುಕ್ಮಿಣಿ ವಸಂತ್​ ಈಗ ಪರ ಭಾಷೆಗಳಲ್ಲಿ ಸಿನಿಮಾಗಳಲ್ಲಿ ಸಖತ್ ಬ್ಯುಸಿ ಆಗಿದ್ದಾರೆ.

    ಕನ್ನಡದ ನಟಿ ರುಕ್ಮಿಣಿ

ರುಕ್ಮಿಣಿ ವಸಂತ್ ಈಗಾಗಲೇ ಜೂ ಎನ್​ಟಿಆರ್ ನಟಿಸಿ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

  ಜೂ ಎನ್​ಟಿಆರ್ ಜೊತೆಗೆ

ರುಕ್ಮಿಣಿ ವಸಂತ್ ಇದೀಗ ಮತ್ತೊಬ್ಬ ತೆಲುಗು ಸ್ಟಾರ್ ನಟನ ಜೊತೆ ನಟಿಸಲಿದ್ದಾರೆ. ನಿರ್ದೇಶನ ಮಾಡುತ್ತಿರುವುದು ಸ್ಟಾರ್ ನಿರ್ದೇಶಕ.

 ಮತ್ತೊಬ್ಬ ತೆಲುಗು ಸ್ಟಾರ್

ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಹೊಸ ಸಿನಿಮಾನಲ್ಲಿ ರುಕ್ಮಿಣಿ ನಟಿಸಲಿದ್ದಾರೆ.

     ತ್ರಿವಿಕ್ರಮ್ ಶ್ರೀನಿವಾಸ್

ಆದರೆ ಈ ಸಿನಿಮಾಕ್ಕೆ ನಾಯಕನಾಗಿ ನಟಿಸುತ್ತಿರುವುದು ತೆಲುಗಿನ ಸ್ಟಾರ್ ಹಾಗೂ ಹಿರಿಯ ನಟ ವೆಂಕಟೇಶ್ ದಗ್ಗುಬಾಟಿ.

  ನಟ ವೆಂಕಟೇಶ್ ಜೊತೆಗೆ

ವೆಂಕಟೇಶ್ ದಗ್ಗುಬಾಟಿ ಜೊತೆಗೆ ಕೌಟುಂಬಿಕ ಕಾಮಿಡಿ ಸಿನಿಮಾ ಅನ್ನು ತ್ರಿವಿಕ್ರಮ್ ಮಾಡುತ್ತಿದ್ದು, ಇದರ ನಾಯಕಿ ರುಕ್ಮಿಣಿ.

ಕೌಟುಂಬಿಕ ಕಾಮಿಡಿ ಚಿತ್ರ

ಸಿನಿಮಾಕ್ಕೆ ‘ಆನಂದ್ ರಾವ್’ ಎಂದು ತ್ರಿವಿಕ್ರಮ್ ಶ್ರೀನಿವಾಸ್ ಹೆಸರಿಟ್ಟಿದ್ದು, ‘ಮಲ್ಲೇಶ್ವರಿ’ ಮಾದರಿಯ ಕತೆಯನ್ನು ಸಿನಿಮಾ ಹೊಂದಿರಲಿದೆ.

   ಸಿನಿಮಾ ಹೆಸರು ಏನು?

ರುಕ್ಮಿಣಿ ವಸಂತ್ ಪಾಲಿಗೆ ಇದು ಮೂರನೇ ತೆಲುಗು ಸಿನಿಮಾ ಆಗಲಿದೆ. ತಮಿಳಿನಿಂದಲೂ ನಟಿಗೆ ಆಫರ್​ಗಳು ಬರುತ್ತಿವೆ.

ಮೂರನೇ ತೆಲುಗು ಸಿನಿಮಾ