‘ಪ್ರೇಮದ ಊರಲಿ’ ಸಿನಿಮಾನಲ್ಲಿ ನಟಿಸಬೇಕಿತ್ತು ನಟಿ ರುಕ್ಮಿಣಿ ವಸಂತ್

06 OCT 2026

By  Manjunatha

ರುಕ್ಮಿಣಿ ವಸಂತ್ ಅವರು ಕನ್ನಡದ ನಟಿ ಆದರೆ ಈಗ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಸಖತ್ ಬ್ಯುಸಿ ಆಗಿದ್ದಾರೆ.

      ನಟಿ ರುಕ್ಮಿಣಿ ವಸಂತ್

ಹಲವು ಭಾಷೆಗಳ ಸಿನಿಮಾಗಳಲ್ಲಿ ಸ್ಟಾರ್ ನಟರುಗಳೊಟ್ಟಿಗೆ ರುಕ್ಮಿಣಿ ವಸಂತ್ ನಟನೆ ಮಾಡುತ್ತಿದ್ದಾರೆ.

 ಹಲವು ಭಾಷೆಗಳ ಸಿನಿಮಾ

ಆದರೆ ಅವರು ಕನ್ನಡದ ಹಿಟ್ ಸಿನಿಮಾನಲ್ಲಿ ನಟಿಸುವ ಅವಕಾಶವನ್ನು ಕಳೆದುಕೊಂಡಿದ್ದರು. ಅದುವೇ ‘ಪ್ರೇಮದ ಊರಲಿ’.

   ಕನ್ನಡದ ಹಿಟ್ ಸಿನಿಮಾ

ಈಗ ಬ್ಲಾಕ್ ಬಸ್ಟರ್ ಆಗಿರುವ ‘ಪ್ರೇಮದ ಊರಲಿ’ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ಅವರು ನಟನೆ ಮಾಡಬೇಕಿತ್ತು.

‘ಪ್ರೇಮದ ಊರಲಿ’ ಸಿನಿಮಾ

ಸಿನಿಮಾಕ್ಕೆ ಸಹ ‘ರುಕ್ಮಿಣಿ-ವಸಂತ’ ಎಂದೇ ಹೆಸರಿಡಲಾಗಿತ್ತಂತೆ. ಆದರೆ ಕಾರಣಾಂತರಗಳಿಂದ ರುಕ್ಮಿಣಿ ಅವರು ಸಿನಿಮಾನಲ್ಲಿ ನಟಿಸಲಿಲ್ಲ.

 ‘ರುಕ್ಮಿಣಿ-ವಸಂತ’ ಟೈಟಲ್

ಸಣ್ಣ ಬಜೆಟ್ ಮತ್ತು ನಟಿ ಸಹ ಬ್ಯುಸಿ ಇದ್ದಿದ್ದರಿಂದ ಅವರನ್ನು ಸಿನಿಮಾಕ್ಕೆ ಕರೆತರಲು ಚಿತ್ರತಂಡಕ್ಕೆ ಸಾಧ್ಯವಾಗಲಿಲ್ಲ.

    ಚಿತ್ರತಂಡಕ್ಕೆ  ಆಗಲಿಲ್ಲ

ಆದರೆ ಅವರ ಹೆಸರು ನಿರ್ದೇಶಕರಿಗೆ ಇಷ್ಟವಾದ ಕಾರಣ ಸಿನಿಮಾದ ಇಬ್ಬರು ನಾಯಕಿಯರಿಗೆ ‘ರುಕ್ಮಿಣಿ’ ಮತ್ತು ‘ವಸಂತ’ ಎಂದು ಹೆಸರಿಟ್ಟರಂತೆ.

   ನಾಯಕಿಯರಿಗೆ ಹೆಸರು

ಅಂದಹಾಗೆ ರುಕ್ಮಿಣಿ ವಸಂತ್ ಅವರು ತೆಲುಗು, ಮಲಯಾಳಂ ಜೊತೆಗೆ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.ಪರಭಾಷೆಗಳಲ್ಲಿ.

    ಹಲವು ಸಿನಿಮಾಗಳಲ್ಲಿ