ಸಮಂತಾಗೆ ಇಲ್ಲ ಅವಕಾಶ, ವೆಟ್ರಿ ಸಿನಿಮಾಕ್ಕೆ ಸಾಯಿ ಪಲ್ಲವಿ ಆಯ್ಕೆ

09 OCT 2025

By  Manjunatha

ವೆಟ್ರಿಮಾರನ್ ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರುಗಳಲ್ಲಿ ಒಬ್ಬರಾಗಿದ್ದಾರೆ.

 ನಿರ್ದೇಶಕ ವೆಟ್ರಿಮಾರನ್

ಇದೀಗ ವೆಟ್ರಿಮಾರನ್ ನಿರ್ದೇಶಿಸಲಿರುವ ಮುಂದಿನ ಸಿನಿಮಾಕ್ಕೆ ಸಮಂತಾ ನಾಯಕಿ ಆಗಲಿದ್ದಾರೆಂಬ ಸುದ್ದಿ ಹರಿದಾಡಿತ್ತು.

      ಸಮಂತಾ ನಾಯಕಿ

ವೆಟ್ರಿಯ ಮುಂದಿನ ಸಿನಿಮಾನಲ್ಲಿ ಸಿಂಭು ನಾಯಕನಾಗಿಯೂ, ಸಮಂತಾ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು.

         ಸಿಂಭು ನಾಯಕ

ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಯಂತೆ ವೆಟ್ರಿಮಾರನ್ ಮುಂದಿನ ಸಿನಿಮಾಕ್ಕೆ ಸಾಯಿ ಪಲ್ಲವಿ ನಾಯಕಿ.

   ಸಾಯಿ ಪಲ್ಲವಿ ನಾಯಕಿ

ಸಿಂಭು ನಾಯಕನಾಗಿ ನಟಿಸಲಿದ್ದು ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಲಿದ್ದಾರೆ. ವೆಟ್ರಿ ಜೊತೆಗೆ ಸಾಯಿ ಪಲ್ಲವಿಗೆ ಮೊದಲ ಸಿನಿಮಾ ಇದು.

   ಮೊದಲ ಸಿನಿಮಾ ಇದು

ಸಾಯಿ ಪಲ್ಲವಿ ಈಗಾಗಲೇ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇದೀಗ ವೆಟ್ರಿ ಸಿನಿಮಾಕ್ಕೂ ಎಸ್ ಹೇಳಿದ್ದಾರೆ.

   ವೆಟ್ರಿ ಸಿನಿಮಾಕ್ಕೂ ಎಸ್

ಸಾಯಿ ಪಲ್ಲವಿ ಪ್ರಸ್ತುತ ರಣ್​​ಬೀರ್ ಕಪೂರ್, ಯಶ್ ನಟನೆಯ ‘ರಾಮಾಯಣ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

   ‘ರಾಮಾಯಣ’ ಸಿನಿಮಾ

ಅದರ ಜೊತೆಗೆ ಇನ್ನೂ ಕೆಲ ತಮಿಳು ಹಾಗೂ ತೆಲುಗು ಸಿನಿಮಾಗಳನ್ನು ಸಹ ಸಾಯಿ ಪಲ್ಲವಿ ಒಪ್ಪಿಕೊಂಡಿದ್ದಾರೆ.

   ತಮಿಳು ಹಾಗೂ ತೆಲುಗು