ನಟಿ ಸಾಯಿ ಪಲ್ಲವಿಗೆ ವಿಶೇಷ ಗೌರವ, ‘ಕಲೈಮಾಮಣಿ’ ಪ್ರಶಸ್ತಿ

26 SEP 2025

By  Manjunatha

ಸಾಯಿ ಪಲ್ಲವಿ ದಕ್ಷಿಣ ಭಾರತದ ಬಲು ಜನಪ್ರಿಯ ನಟಿ, ಈಗ ಬಾಲಿವುಡ್​ಗೂ ಎಂಟ್ರಿ ಕೊಟ್ಟಿದ್ದಾರೆ.

       ನಟಿ ಸಾಯಿ ಪಲ್ಲವಿ

ತಮ್ಮ ಅದ್ಭುತ ನಟನೆ, ಸರಳ ಸೌಂದರ್ಯ ಹಾಗೂ ಅದ್ಭುತ ಡ್ಯಾನ್ಸ್​​ನಿಂದ ಸಾಯಿ ಪಲ್ಲವಿ ಹಲವು ಅಭಿಮಾನಿಗಳ ಸೆಳೆದಿದ್ದಾರೆ.

 ನಟನೆ, ಸೌಂದರ್ಯ, ನೃತ್ಯ

ಒಂದರ ಹಿಂದೊಂದು ಹಿಟ್ ಸಿನಿಮಾಗಳಲ್ಲಿ ಸಾಯಿ ಪಲ್ಲವಿ ನಟಿಸುತ್ತಾ ಬಂದಿದ್ದಾರೆ.

      ಹಿಟ್ ಸಿನಿಮಾಗಳಲ್ಲಿ

ಕತೆ ಪ್ರಧಾನವಾದ ಸಿನಿಮಾಗಳಲ್ಲಿ ಮಾತ್ರವೇ ನಟಿಸುವ ಸಾಯಿ ಪಲ್ಲವಿ, ಕೆಲ ನೆನಪುಳಿವ ಪಾತ್ರಗಳಲ್ಲಿ ನಟಿಸಿದ್ದಾರೆ.

   ನೆನಪುಳಿವ ಪಾತ್ರಗಳಲ್ಲಿ

ಇದೀಗ ಸಾಯಿ ಪಲ್ಲವಿಗೆ ತಮಿಳುನಾಡು ಸರ್ಕಾರ ಪ್ರಮುಖವಾದ ಪ್ರಶಸ್ತಿ ನೀಡಿ ಗೌರವಿಸಿದೆ.

     ಪ್ರಮುಖವಾದ ಪ್ರಶಸ್ತಿ

2021, 2022, 2023ನೇ ಸಾಲಿನ ಕಲೈಮಾಮಣಿ ಪ್ರಶಸ್ತಿಗಳನ್ನು ಘೋಷಿಸಿದ್ದು, ಸಾಯಿ ಪಲ್ಲವಿಗೆ ಪ್ರಶಸ್ತಿ ನೀಡಲಾಗಿದೆ.

     ಕಲೈಮಾಮಣಿ ಪ್ರಶಸ್ತಿ

ತಮಿಳುನಾಡಿನಲ್ಲಿ ಕಲಾವಿದರಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಕಲೈಮಾಮಣಿ ಪ್ರಶಸ್ತಿ ಒಂದಾಗಿದೆ.

   ತಮಿಳುನಾಡು ಸರ್ಕಾರ

ಸಾಯಿ ಪಲ್ಲವಿ ಜೊತೆಗೆ ಎಸ್​​ಜೆ ಸೂರ್ಯ, ಅನಿರುದ್ಧ್, ಲಿಂಗು ಸ್ವಾಮಿ ಇನ್ನೂ ಕೆಲವರಿಗೆ ಈ ಪ್ರಶಸ್ತಿ ನೀಡಲಾಗಿದೆ.

        ಹಲವರಿಗೆ ಪ್ರಶಸ್ತಿ