‘ರಾಮಾಯಣ’ದ ಸೀತೆ ಪಾತ್ರ ಸಾಯಿ ಪಲ್ಲವಿ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವುದೇಕೆ?

22 July 2026

By  Manjunatha

ಸಾಯಿ ಪಲ್ಲವಿ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿ, ಅವರಿಗೆ ದಕ್ಷಿಣ ಭಾರತದಲ್ಲಿ ದೊಡ್ಡ ಅಭಿಮಾನಿ ವರ್ಗವೇ ಇದೆ.

  ದಕ್ಷಿಣ ಭಾರತ ಚಿತ್ರರಂಗ

ಸಾಯಿ ಪಲ್ಲವಿ ಇದೀಗ ಬೃಹತ್ ಬಜೆಟ್​​ನ ಬಾಲಿವುಡ್ ಸಿನಿಮಾ ‘ರಾಮಾಯಣ’ದಲ್ಲಿ ಸೀತಾಮಾತೆಯ ಪಾತ್ರದಲ್ಲಿ ನಟಿಸಿದ್ದಾರೆ.

   ‘ರಾಮಾಯಣ’  ಸಿನಿಮಾ

ಆದರೆ ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಕೆಲವರು ಟೀಕೆ ಸಹ ವ್ಯಕ್ತಪಡಿಸಿದ್ದಾರೆ.

ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ

ಹಿರಿಯ ನಟ ಅನ್ನು ಕಪೂರ್ ಇತ್ತೀಚೆಗಷ್ಟೆ ಮಾತನಾಡಿ, ಸಾಯಿ ಪಲ್ಲವಿ, ಸೀತೆ ಪಾತ್ರಕ್ಕೆ ಸೂಟ್ ಆಗುವುದಿಲ್ಲ ಎಂದು ಹೇಳಿದ್ದರು.

ಸೀತೆ ಪಾತ್ರಕ್ಕೆ ಸೂಟ್ ಆಗಲ್ಲ

ಇನ್ನು ಕೆಲವರು ಸಾಯಿ ಪಲ್ಲವಿ ಅವರಿಗೆ ಪೌರಾಣಿಕ ಪಾತ್ರಗಳು ಒಗ್ಗುವುದಿಲ್ಲ ಅವರ ಮುಖಚಹರೆ ಒಪ್ಪುವುದಿಲ್ಲ ಎಂದಿದ್ದಾರೆ.

ಮುಖಚಹರೆ ಒಪ್ಪುವುದಿಲ್ಲ

ಇನ್ನು ಕೆಲವರು ಸಾಯಿ ಪಲ್ಲವಿ ಅವರು ಮೇಕಪ್ ಹಾಕಿಕೊಂಡಾಗ ಚೆನ್ನಾಗಿ ಕಾಣುವುದಿಲ್ಲ ಅವರು ನ್ಯಾಚುರಲ್ ಬ್ಯೂಟಿ ಎಂದಿದ್ದಾರೆ.

    ಚೆನ್ನಾಗಿ ಕಾಣುವುದಿಲ್ಲ

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಟ ಯಶ್, ಸಾಯಿ ಪಲ್ಲವಿ ಅವರು ಸಿನಿಮಾನಲ್ಲಿ ನಟಿಸಿರುವ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಶ್ ಮತ್ತು ಸಾಯಿ ಪಲ್ಲವಿ

ಸಾಯಿ ಪಲ್ಲವಿ ಸಹ, ತಾವು ಸೀತೆ ಪಾತ್ರದಲ್ಲಿ ನಟಿಸಲು ತಮ್ಮನ್ನು ತಾವು ಶುದ್ಧವಾಗಿ, ಆಲೋಚನೆಗಳನ್ನು ಶುದ್ಧವಾಗಿ ಇರಿಸಿಕೊಂಡಿದ್ದಾಗಿ ಹೇಳಿದ್ದಾರೆ.

ಸಾಯಿ ಪಲ್ಲವಿ ಹೇಳಿದ್ದೇನು