ನನಸಾಗಲಿದೆ ಸಾಯಿ ಪಲ್ಲವಿ ಕಂಡ ಕನಸು, ಆ ನಿರ್ದೇಶಕನ ಸಿನಿಮಾದಲ್ಲಿ ಅವಕಾಶ

02 May 2025

By  Manjunatha

ಸಾಯಿ ಪಲ್ಲವಿ ದಕ್ಷಿಣದ ಮಾತ್ರವಲ್ಲ ಬಾಲಿವುಡ್​ ನಿರ್ದೇಶಕರ ಬಲು ಮೆಚ್ಚಿನ ನಟಿ.

      ನಟಿ ಸಾಯಿ ಪಲ್ಲವಿ

ಸಿಕ್ಕ ಸಿಕ್ಕ ಸಿನಿಮಾಗಳನ್ನೆಲ್ಲ ಒಪ್ಪಿಕೊಳ್ಳದೆ ತಮಗೆ ಒಪ್ಪುವ, ಪಾತ್ರಕ್ಕೆ ಸ್ಕೋಪ್ ಇರುವ ಪಾತ್ರಗಳನ್ನಷ್ಟೆ ಅವರು ಒಪ್ಪುತ್ತಾರೆ.

       ಎಚ್ಚರಿಕೆಯ ಆಯ್ಕೆ

‘ಅಮರನ್’ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ್ದ ನಟಿ ಸಾಯಿ ಪಲ್ಲವಿ, ತಮಗೆ ಮಣಿರತ್ನಂ ನಿರ್ದೇಶನದಲ್ಲಿ ಕೆಲಸ ಮಾಡುವಾಸೆ ಎಂದಿದ್ದರು.

    ಮಣಿರತ್ನಂ ನಿರ್ದೇಶನ

ಅಸಲಿಗೆ ಮಣಿರತ್ನಂ ಸಹ ಕಾರ್ಯಕ್ರಮವೊಂದರಲ್ಲಿ ತಾವು ನಟಿ ಸಾಯಿ ಪಲ್ಲವಿಯ ಅಭಿಮಾನಿ ಎಂದಿದ್ದರು.

ಮಣಿರತ್ನಂ ಸಹ ಅಭಿಮಾನಿ

ಈಗ ಸಾಯಿ ಪಲ್ಲವಿಗೆ ಅದೃಷ್ಟ ಖುಲಾಯಿಸಿದೆ, ತಮ್ಮ ಆಸೆಯಂತೆ ಮಣಿರತ್ನಂ ಸಿನಿಮಾನಲ್ಲಿ ಅವರು ನಟಿಸಲಿದ್ದಾರೆ.

 ಮಣಿರತ್ನಂ ಸಿನಿಮಾನಲ್ಲಿ

ಕೆಲ ಮೂಲಗಳ ಪ್ರಕಾರ ಮಣಿರತ್ನಂ ಅವರ ಮುಂದಿನ ಸಿನಿಮಾನಲ್ಲಿ ಸಾಯಿ ಪಲ್ಲವಿ ನಾಯಕಿಯಂತೆ.

   ಮುಂದಿನ ಸಿನಿಮಾನಲ್ಲಿ

ಮಣಿರತ್ನಂ ಪ್ರಸ್ತುತ ‘ಥಗ್ ಲೈಫ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

     ‘ಥಗ್ ಲೈಫ್’ ಸಿನಿಮಾ

‘ಥಗ್ ಲೈಫ್’ ಸಿನಿಮಾದ ಬಳಿಕ ನಿರ್ದೇಶಿಸಲಿರುವ ಪ್ರೇಮಕತಾ ಸಿನಿಮಾನಲ್ಲಿ ಸಾಯಿ ಪಲ್ಲವಿ ನಾಯಕಿ.

     ಪ್ರೇಮಕತಾ ಸಿನಿಮಾ