ಎರಡನೇ ಮದುವೆಗೆ ಸಿದ್ಧವಾಗುತ್ತಿದ್ದಾರೆ ನಟಿ ಸಮಂತಾ?

20 Apr 2025

By  Manjunatha

ನಟಿ ಸಮಂತಾ ಋತ್ ಪ್ರಭು, ನಟ ನಾಗಚೈತನ್ಯ ಜೊತೆ ವಿವಾಹವಾಗಿ ಆ ಬಳಿಕ ವಿಚ್ಛೇದನ ಪಡೆದಿದ್ದು ಹಳೆ ಸುದ್ದಿ.

ನಟಿ ಸಮಂತಾ ಋತ್ ಪ್ರಭು

ನಟ ನಾಗ ಚೈತನ್ಯ ಈಗಾಗಲೇ ಶೋಭಿತಾ ದುಲಿಪಾಲ ಅವರನ್ನು ವಿವಾಹವಾಗಿ ದಾಂಪತ್ಯ ನಡೆಸುತ್ತಿದ್ದಾರೆ.

    ನಾಗ ಚೈತನ್ಯ ಮದುವೆ

ಆದರೆ ನಟಿ ಸಮಂತಾ ಮಾತ್ರ ಸಿಂಗಲ್ ಆಗಿಯೇ ಉಳಿದಿದ್ದರು. ಆದರೆ ಈಗ ಸಮಂತಾ ಸಹ ಎರಡನೇ ವಿವಾಹಕ್ಕೆ ಸಿದ್ಧವಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಸಿಂಗಲ್ ಆಗಿದ್ದ ಸಮಂತಾ

ಸಮಂತಾ ಹೆಸರು ನಿರ್ದೇಶಕ ರಾಜ್ ನಿಧಿಮೊರು ಜೊತೆಗೆ ತುಸು ಗಟ್ಟಿಯಾಗಿಯೇ ಕೇಳಿ ಬರುತ್ತಿದೆ. ಈ ಜೋಡಿ ಸಹ ಹಲವು ಕಡೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

  ರಾಜ್ ನಿಧಿಮೊರು ಜೊತೆ

ಇತ್ತೀಚೆಗಷ್ಟೆ ಸಮಂತಾ ಮತ್ತು ರಾಜ್ ನಿಧಿಮೊರು ಅವರುಗಳು ತಿರುಪತಿ ದೇವಾಲಯಕ್ಕೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 

    ತಿರುಪತಿ ದೇವಾಲಯ

ಸಮಂತಾ ಮತ್ತು ರಾಜ್ ನಿಧಿಮೊರು ಮದುವೆ ಆಗಲು ನಿಶ್ಚಯಿಸಿದ್ದು, ಇದೇ ಕಾರಣಕ್ಕೆ ಈ ಜೋಡಿ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದೆ ಎನ್ನಲಾಗುತ್ತಿದೆ.

   ಸಮಂತಾ ಮತ್ತು ರಾಜ್ 

ಅಂದಹಾಗೆ ರಾಜ್ ನಿಧಿಮೋರು ಅವರಿಗೆ ಈಗಾಗಲೇ ವಿವಾಹವಾಗಿದ್ದು ಮಕ್ಕಳು ಸಹ ಇದ್ದಾರೆ. ಆದರೂ ಸಮಂತಾ ಜೊತೆಗೆ ವಿವಾಹಕ್ಕೆ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

   ರಾಜ್​ಗೆ ಮದುವೆ ಆಗಿದೆ

ರಾಜ್ ನಿಧಿಮೋರು ಜನಪ್ರಿಯ ನಿರ್ದೇಶಕರಾಗಿದ್ದು, ಹಲವು ಹಿಟ್ ವೆಬ್ ಸರಣಿ ಮತ್ತು ಕೆಲ ಸಿನಿಮಾಗಳನ್ನು ರಾಜ್-ಡಿಕೆ ಹೆಸರಲ್ಲಿ ನಿರ್ದೇಶನ ಮಾಡಿದ್ದಾರೆ.

ರಾಜ್ ಜನಪ್ರಿಯ ನಿರ್ದೇಶಕ