ಸಿಡ್ನಿಯ ಇಂಡಿಯನ್ ಫಿಲಂ ಫೆಸ್ಟ್​ನಲ್ಲಿ ಸಮಂತಾ ಋತ್ ಪ್ರಭು

28 Mar 2025

 Manjunatha

ನಟಿ ಸಮಂತಾ ಋತ್ ಪ್ರಭು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಅಲ್ಲಿಯ ಫಿಲಂ ಫೆಸ್ಟ್​ನಲ್ಲಿ ಸಹ ಭಾಗಿ ಆಗಿದ್ದಾರೆ.

ನಟಿ ಸಮಂತಾ ಋತ್ ಪ್ರಭು

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಪ್ರತಿಷ್ಟಿತ ಇಂಡಿಯನ್ ಫಿಲಂ ಫೆಸ್ಟ್​ನಲ್ಲಿ ಅತಿಥಿಯಾಗಿ ನಟಿ ಸಮಂತಾ ಭಾಗಿ ಆಗಿದ್ದಾರೆ.

  ಇಂಡಿಯನ್ ಫಿಲಂ ಫೆಸ್ಟ್​  

ಆಸ್ಟ್ರೇಲಿಯಾನಲ್ಲಿ ನಡೆಯುತ್ತಿರುವ 11ನೇ ಭಾರತೀಯ ಚಲನಚಿತ್ರ ಉತ್ಸವ ಇದಾಗಿದ್ದು, ಈ ಬಾರಿಯ ಅತಿಥಿ ಸಮಂತಾ.

  11ನೇ  ಚಲನಚಿತ್ರೋತ್ಸವ

ಈ ಸಿಡ್ನಿ ಇಂಡಿಯನ್ ಫಿಲಂ ಫೇಸ್ಟ್​ನಲ್ಲಿ ಭಾರತದ ಹಲವು ಭಾಷೆಗಳ ಹಲವಾರು ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ.

ಭಾರತೀಯ ಚಿತ್ರ ಪ್ರದರ್ಶನ

ಫಿಲಂ ಫೆಸ್ಟ್​ನಲ್ಲಿ ಭಾಗಿ ಆಗಿದ್ದ ನಟಿ ಸಮಂತಾ, ವೃತ್ತಿ ಜೀವನದಲ್ಲಿ ತಾವೆದುರಿಸಿದ ಸವಾಲುಗಳು ಇನ್ನಿತರೆ ಬಗ್ಗೆ ಮಾತನಾಡಿದ್ದಾರೆ.

  ಮಾತನಾಡಿದ ಸಮಂತಾ

ಸಿಡ್ನಿ ಫಿಲಂ ಫೆಸ್ಟ್​ನಲ್ಲಿ ಭಾರತೀಯ ಸಿನಿಮಾಗಳ ಬಗ್ಗೆಯೂ ಸಹ ನಟಿ ಮಾತನಾಡಿದ್ದಾರೆ. ಸಿನಿಮಾಗಳಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ.

     ಸಿನಿಮಾ ಬಗ್ಗೆ ಮಾತು

ಫಿಲಂ ಫೆಸ್ಟ್ ಜೊತೆಗೆ ಆಸ್ಟ್ರೇಲಿಯಾದಲ್ಲಿ ಪ್ರವಾಸದಲ್ಲಿಯೂ ಸಹ ನಟಿ ತೊಡಗಿಕೊಂಡಿದ್ದು, ಕೆಲ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಪ್ರವಾಸ

ಸಮಂತಾ ಪ್ರಸ್ತುತ ಹಿಂದಿ ಮತ್ತು ತೆಲುಗು ಸಿನಿಮಾಗಳು ಹಾಗೂ ವೆಬ್ ಸರಣಿಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

      ತೆಲುಗು ಸಿನಿಮಾಗಳು

ಸಮಂತಾ ಇತ್ತೀಚೆಗಷ್ಟೆ ತಮ್ಮ ಸಿನಿಮಾ ನಿರ್ಮಾಣ ಸಂಸ್ಥೆಯೊಂದನ್ನು ಸಹ ಪ್ರಾರಂಭ ಮಾಡಿದ್ದು, ಒಂದು ಸಿನಿಮಾ ನಿರ್ಮಿಸಿದ್ದಾರೆ.

ನಿರ್ಮಾಣ ಸಂಸ್ಥೆ ಪ್ರಾರಂಭ