ಆನ್​​ಲೈನ್ ಹಿಂಸೆ ವಿರುದ್ಧ ಜಾಗೃತಿ ಮೂಡಿಸಲು ಮುಂದಾದ ಸಮಂತಾ

25 NOV 2025

By  Manjunatha

ಸಮಂತಾ ಋತ್ ಪ್ರಭು, ನಟಿಯಾಗಿರುವ ಜೊತೆಗೆ ಸಮಾಜ ಮುಖಿ ಕಾರ್ಯಗಳಲ್ಲಿಯೂ ಸಹ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

    ಸಮಂತಾ ಋತ್ ಪ್ರಭು

ಸಮಂತಾ ಅವರು ಹಲವು ಕಾರಣಗಳಿಗೆ ಆನ್​​ಲೈನ್​​​ನಲ್ಲಿ ಸಾಕಷ್ಟು ನಿಂದನೆ, ಟೀಕೆಗಳನ್ನು ಈ ಹಿಂದೆ ಎದುರಿಸಿದ್ದಾರೆ.

 ನಿಂದನೆ, ಟೀಕೆ ಸಹಿಸಿದ್ದಾರೆ

ಆದರೆ ಇದೀಗ ಸಮಂತಾ ಅವರು ಆನ್​​ಲೈನ್ ಹಿಂಸೆಯ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

     ಜಾಗೃತಿ ಕಾರ್ಯಕ್ರಮ

ಯುಎನ್ (ವಿಶ್ವಸಂಸ್ಥೆ) ವಿಮೆನ್ ಇಂಡಿಯಾ ನವರು ಸಮಂತಾ ಅವರನ್ನು ಆನ್​ಲೈನ್ ಹಿಂಸಾಚಾರ ವಿರುದ್ಧ ಜಾಗೃತಿಗೆ ಆಯ್ಕೆ ಮಾಡಿದ್ದಾರೆ.

       ಲೈನ್ ಹಿಂಸಾಚಾರ

ಮಹಿಳೆಯರ ವಿರುದ್ಧ ಡಿಜಿಟಲ್ ವಯಲೆನ್ಸ್ ಅಂತ್ಯ ಮಾಡುವುದು ಈ ಕಾರ್ಯಕ್ರಮದ ಉದ್ದೇಶ. ಸಮಂತಾ ಇದರ ರಾಯಭಾರಿ.

    ಸಮಂತಾ ರಾಯಭಾರಿ

ಡಿಜಿಟಲ್ ಹಿಂಸಾಚಾರದ ವಿರುದ್ಧ 14 ದಿನಗಳ ಸಂವಾದ ಮತ್ತು ಪ್ರತಿಭಟನೆ ಕಾರ್ಯಕ್ರಮ ನಡೆಯಲಿದ್ದು, ಸಮಂತಾ ಸಹ ಭಾಗವಹಿಸಲಿದ್ದಾರೆ.

ಸಂವಾದ ಮತ್ತು ಪ್ರತಿಭಟನೆ

ಸಮಂತಾ ಋತ್ ಪ್ರಭು ಅವರು ಡಿಜಿಟಲ್ ಹಿಂಸಾಚಾರದ ಸಂತ್ರಸ್ಥೆ ಸಹ ಹೌದು. ಹಾಗಾಗಿ ಅವರನ್ನೇ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ.

     ಡಿಜಿಟಲ್ ಹಿಂಸಾಚಾರ

ಸಮಂತಾ ಅವರು ಡಿಜಿಟಲ್ ಡಿಟಾಕ್ಸ್ ಸೇರಿದಂತೆ ಇನ್ನೂ ಕೆಲವು ವಿಷಯಗಳ ಬಗ್ಗೆ ಈ ಹಿಂದೆಯೂ ಮಾತನಾಡಿದ್ದರು.

        ಡಿಜಿಟಲ್ ಡಿಟಾಕ್ಸ್