ಸ್ಟಾರ್ ನಿರ್ದೇಶಕನ ಜೊತೆಗೆ ಸಮಂತಾ ಮುಂದಿನ ಸಿನಿಮಾ, ಹಿಟ್ ಪಕ್ಕಾ?

01 July 2025

By  Manjunatha

ಸಮಂತಾ ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಆದರೆ ಇತ್ತೀಚೆಗೆ ಅವಕಾಶಗಳು ತುಸು ಕಡಿಮೆ ಆಗಿವೆ.

   ಪ್ಯಾನ್ ಇಂಡಿಯಾ ನಟಿ

ಸಮಂತಾ ಕೈಯಲ್ಲಿ ಈಗ ಒಂದು ಹಿಂದಿ ವೆಬ್ ಸರಣಿ, ಒಂದು ತೆಲುಗು ಸಿನಿಮಾ ಮಾತ್ರವೇ ಇದೆ.

   ಎರಡು ಪ್ರಾಜೆಕ್ಟ್ ಮಾತ್ರ

ಆದರೆ ಇದೀಗ ಸಮಂತಾ ಅಭಿಮಾನಿಗಳು ಖುಷಿ ಪಡುವ ಸುದ್ದಿಯೊಂದು ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿದೆ.

      ಖುಷಿ ಪಡುವ ಸುದ್ದಿ

ಸೂಪರ್ ಹಿಟ್ ನಿರ್ದೇಶಕರೊಬ್ಬರು ಸಮಂತಾ ಅವರ ಮುಂದಿನ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.

 ಸೂಪರ್ ಹಿಟ್ ನಿರ್ದೇಶಕ

ಇತ್ತೀಚೆಗೆ ಬಿಡುಗಡೆ ಆದ ಸೂಪರ್ ಹಿಟ್ ಸಿನಿಮಾ ‘ಕುಬೇರ’ ನಿರ್ದೇಶನ ಮಾಡಿರುವ ಶೇಖರ್ ಕಮ್ಮುಲ ಸಮಂತಾರ ಮುಂದಿನ ಸಿನಿಮಾ ನಿರ್ದೇಶಿಸಲಿದ್ದಾರೆ.

ನಿರ್ದೇಶಕ ಶೇಖರ್ ಕಮ್ಮುಲ

ಶೇಖರ್ ಕಮ್ಮುಲ ಈ ಹಿಂದೆ ‘ಗೋಧಾವರಿ’, ‘ಆನಂದ್’, ‘ಹ್ಯಾಪಿ ಡೇಸ್’ ಇನ್ನೂ ಹಲವು ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದಾರೆ.

ಸೂಪರ್ ಹಿಟ್ ಸಿನಿಮಾಗಳು

ಮಹಿಳಾ ಪ್ರಧಾನ ಸಿನಿಮಾ ಮಾಡುವುದರಲ್ಲಿ ಎತ್ತಿದ ಕೈ ಆಗಿರುವ ಕಮ್ಮುಲ, ಸಮಂತಾರನ್ನು ಹೇಗೆ ತೋರಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಮಹಿಳಾ ಪ್ರಧಾನ ಸಿನಿಮಾ

ಸಮಂತಾ ವೃತ್ತಿ ಜೀವನಕ್ಕೆ ಈ ಸಿನಿಮಾ ತಿರುವು ನೀಡುತ್ತದೆಯೇ ಕಾದು ನೋಡಬೇಕಿದೆ.

    ವೃತ್ತಿ ಜೀವನಕ್ಕೆ  ತಿರುವು