ಕೈಯಲ್ಲಿ ಸಿನಿಮಾ ಇಲ್ಲ, ಆದರೆ ನೆಮ್ಮದಿ ಇದೆ: ಸಮಂತಾ

12 SEP 2025

By  Manjunatha

ಸಮಂತಾ ಋತ್ ಪ್ರಭು ದಕ್ಷಿಣದ ಸ್ಟಾರ್ ನಟಿ, ಕೆಲ ಹಿಂದಿ ವೆಬ್ ಸರಣಿಗಳಲ್ಲಿಯೂ ನಟಿಸಿದ್ದಾರೆ.

    ಸಮಂತಾ ಋತ್ ಪ್ರಭು

ಆದರೆ ಇತ್ತೀಚೆಗೆ ಸಮಂತಾ ಅವರಿಗೆ ಹೊಸ ಸಿನಿಮಾ ಅವಕಾಶಗಳು ಬರುತ್ತಿಲ್ಲ. ಹೀಗೆಂದು ಅವರೇ ಹೇಳಿದ್ದರು.

 ಹೊಸ ಸಿನಿಮಾ ಅವಕಾಶ

ಇತ್ತೀಚೆಗೆ ಸಂವಾದದಲ್ಲಿ ಈ ಬಗ್ಗೆ ಮತ್ತೆ ಮಾತನಾಡಿರುವ ಸಮಂತಾ, ಸ್ಟಾರ್ ಡಮ್ ಎನ್ನುವುದು ಫೇಕ್ ಎಂದಿದ್ದಾರೆ.

 ಫೇಕ್ ಸ್ಟಾರ್ ಗಿರಿ: ಸ್ಯಾಮ್

ನನ್ನ ಸಿನಿಮಾ ಬಿಡುಗಡೆ ಆಗಿ ಎರಡು ವರ್ಷವಾಯ್ತು, ಹಿಟ್ ಪಟ್ಟಿಯಲ್ಲಿ ನನ್ನ ಹೆಸರಿಲ್ಲ, ಆದರೆ ನೆಮ್ಮದಿ ಇದೆ ಎಂದಿದ್ದಾರೆ.

  ಸಿನಿಮಾ ಬಂದು 2 ವರ್ಷ

ನನ್ನ ಹೆಸರಲ್ಲಿ ಯಾವುದೇ 1000 ಕೋಟಿ ಸಿನಿಮಾಗಳಿಲ್ಲ, ಆದರೆ ಈ ಹಿಂದೆ ಇಲ್ಲದಷ್ಟು ಖುಷಿಯಾಗಿ ನಾನಿದ್ದೇನೆ ಎಂದಿದ್ದಾರೆ.

1000 ಕೋಟಿ ಸಿನಿಮಾ ಇಲ್ಲ

ಸ್ಟಾರ್ ಡಮ್ ಎನ್ನುವುದು ಫೇಕ್, ಅದು ಯಾರೋ ಒಬ್ಬರ ಶ್ರಮವಲ್ಲ, ಜನರ ಪ್ರೀತಿ, ಅದೃಷ್ಟ ಬೇರೆಯವರ ಶ್ರಮ ಅದರಲ್ಲಿರುತ್ತದೆ ಎಂದಿದ್ದಾರೆ.

ಯಾರೋ ಒಬ್ಬರ ಶ್ರಮವಲ್ಲ

ದೊಡ್ಡ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆ ನನಗೆ ಇಲ್ಲ, ಆದರೆ ನಾನು ಮಾಡುವ ಕೆಲಸ ಪ್ರಭಾವ ಬೀರಬೇಕು ಎಂದಿದ್ದಾರೆ ಸ್ಯಾಮ್.

   ಪ್ರಭಾವ ಬೀರುವ ಕೆಲಸ

ಸಮಂತಾ ಪ್ರಸ್ತುತ ಒಂದು ಹಿಂದಿ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ಅವರ ಸಿನಿಮಾ ನಿಂತು ಹೋಗಿದೆ ಎನ್ನಲಾಗುತ್ತಿದೆ.

 ವೆಬ್ ಸರಣಿಯಲ್ಲಿ ನಟನೆ