ಸಮಂತಾಗೆ ಭಾರಿ ದೊಡ್ಡ ಅವಕಾಶ, ವೃತ್ತಿ ಜೀವನದ ಬಿಗ್​ಬಜೆಟ್ ಸಿನಿಮಾದಲ್ಲಿ ನಟನೆ

09 Apr 2025

By  Manjunatha

ಸಮಂತಾಗೆ ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆ ಆಗಿವೆ. ಹಿಂದಿಯಲ್ಲಿ ಅವಕಾಶ ಹೆಚ್ಚಾಗಿದೆ.

ಅವಕಾಶಗಳು ಕಡಿಮೆ ಆಗಿವೆ

ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಸ್ವತಃ ಸಮಂತಾ ಈ ವಿಷಯ ಹೇಳಿಕೊಂಡಿದ್ದರು. ತಮಗೆ ಅವಕಾಶ ಕಡಿಮೆ ಆಗಿದೆಯೆಂದು.

  ಟಾಲಿವುಡ್​ನಿಂದ ದೂರ

ಇದೇ ಕಾರಣಕ್ಕೆ ಸಮಂತಾ ಬಾಲಿವುಡ್​ ಕಡೆ ವಾಲಿದ್ದು, ಅಲ್ಲಿ ಒಂದರ ಹಿಂದೊಂದು ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ.

ಬಾಲಿವುಡ್​ ಕಡೆ ವಾಲಿದ್ದಾರೆ

ಇದೀಗ ಸಮಂತಾಗೆ ಭಾರಿ ದೊಡ್ಡ ಸಿನಿಮಾ ಅವಕಾಶವೊಂದು ಬಂದಿದೆ. ಸ್ಟಾರ್ ನಟನೊಟ್ಟಿಗೆ ನಟಿಸುವ ಅವಕಾಶ ಸಿಕ್ಕಿದೆ.

ದೊಡ್ಡ ಸಿನಿಮಾ ಅವಕಾಶ

ಸಮಂತಾ, ಇದೀಗ ಅಲ್ಲು ಅರ್ಜುನ್ ನಟನೆಯ ಭಾರಿ ಬಜೆಟ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರಂತೆ.

ಭಾರಿ ಬಜೆಟ್ ಸಿನಿಮಾದಲ್ಲಿ

ಅಟ್ಲಿ ನಿರ್ದೇಶಿಸಿ ಅಲ್ಲು ಅರ್ಜುನ್ ನಟಿಸಲಿರುವ ಸೂಪರ್ ಹೀರೋ-ಏಲಿಯನ್ ಸಿನಿಮಾದಲ್ಲಿ ಸಮಂತಾ ನಾಯಕಿ.

ಸೂಪರ್ ಹೀರೋ ಸಿನಿಮಾ

ಸಮಂತಾ ವೃತ್ತಿ ಜೀವನದಲ್ಲಿಯೇ ಇದು ಭಾರಿ ಬಜೆಟ್ ನ ಸಿನಿಮಾ ಆಗಲಿದ್ದು, ಇದಕ್ಕಾಗಿ ತರಬೇತಿ ಸಹ ಪಡೆಯಲಿದ್ದಾರಂತೆ.

  ಭಾರಿ ಬಜೆಟ್ ನ ಸಿನಿಮಾ

ಸಮಂತಾ ಹಾಗೂ ಅಲ್ಲು ಅರ್ಜುನ್ ಈ ಹಿಂದೆ ‘ಸನ್ ಆಫ್ ಸತ್ಯಮೂರ್ತಿ’ ಸಿನಿಮಾದಲ್ಲಿ ನಟಿಸಿದ್ದರು.

  ಸನ್ ಆಫ್ ಸತ್ಯಮೂರ್ತಿ

ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾದಲ್ಲಿ ಸಮಂತಾ ಐಟಂ ಹಾಡಿನಲ್ಲಿ ಸಹ ಕಾಣಿಸಿಕೊಂಡಿದ್ದರು.

  ಅಲ್ಲು ಅರ್ಜುನ್ ಜೊತೆಗೆ