ಮಾಜಿ ಮೈದುನನಿಗೆ ಶುಭ ಕೋರಿದ ಸಮಂತಾ, ಭೇಷ್ ಎಂದ ನೆಟ್ಟಿಗರು

10 July 2026

By  Manjunatha

ಸಮಂತಾ ಋತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ.

   ಸಮಂತಾ ಋತ್ ಪ್ರಭು

ಆದರೆ ಅವರ ಸಿನಿಮಾದ ಓಟಕ್ಕೆ ಅಡ್ಡಗಾಲಾಗಿ ಅಖಿಲ್ ಅಕ್ಕಿನೇನಿಯ ಸಿನಿಮಾ ‘ಲೆನಿನ್’ ಬಿಡುಗಡೆ ಆಗಿದೆ.

ಅಖಿಲ್ ಅಕ್ಕಿನೇನಿ ಸಿನಿಮಾ

ಅಖಿಲ್ ಅಕ್ಕಿನೇನಿ, ಸಮಂತಾ ಋತ್ ಪ್ರಭು ಅವರ ಮಾಜಿ ಪತಿ ನಾಗ ಚೈತನ್ಯ ಅವರ ಸಹೋದರ.

 ಮಾಜಿ ಪತಿಯ ಸಹೋದರ

ಮಾಜಿ ಪತಿಯ ಸಹೋದನಾದರೂ, ತಮ್ಮ ಸಿನಿಮಾಕ್ಕೆ ಎದುರಾಳಿ ಆದರೂ ಸಮಂತಾ ಅಖಿಲ್ ಸಿನಿಮಾಕ್ಕೆ ಶುಭ ಕೋರಿದ್ದಾರೆ.

        ಶುಭ ಕೋರಿದ್ದಾರೆ

‘ಲೆನಿನ್’ ಅಖಿಲ್ ಅಕ್ಕಿನೇನಿ ಇಡೀ ತಂಡಕ್ಕೆ ಶುಭ ಹಾರೈಕೆಗಳು, ಸಿನಿಮಾ ಬ್ಲಾಕ್ ಬಸ್ಟರ್ ಆಗಲಿದೆ ಎಂದಿದ್ದಾರೆ ಸಮಂತಾ.

    ತಂಡಕ್ಕೆ ಶುಭ ಹಾರೈಕೆ

ಹಳೆಯ ಮುನಿಸು ಮರೆತು ಮಾಜಿ ಮೈದುನನ ಸಿನಿಮಾಕ್ಕೆ ಶುಭ ಕೋರಿರುವುದಕ್ಕೆ ನೆಟ್ಟಿಗರು ಸಮಂತಾಗೆ ಭೇಷ್ ಎಂದಿದ್ದಾರೆ.

  ಮಾಜಿ ಮೈದುನ ಅಖಿಲ್

ಸಮಂತಾ ಅವರ ‘ಮಾ ಇಂಟಿ ಬಂಗಾರಂ’ ಸಿನಿಮಾ 100 ಕೋಟಿ ಗಳಿಕೆಯ ಹೊಸ್ತಿಲಲ್ಲಿರುವಾಗ, ‘ಲೆನಿನ್’ ಬಿಡುಗಡೆ ಆಗಿದೆ.

        100 ಕೋಟಿ ಗಳಿಕೆ

‘ಮಾ ಇಂಟಿ ಬಂಗಾರಂ’ ಸಿನಿಮಾದ ಪ್ರದರ್ಶನಕ್ಕೆ ‘ಲೆನಿನ್’ ಅಡ್ಡಿ ಆಗಲಿದೆ ಎನ್ನಲಾಗಿದೆ. ಆದರೂ ಸಮಂತಾ ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ.

   ‘ಮಾ ಇಂಟಿ ಬಂಗಾರಂ’